50 ಕೋಟಿ ಕ್ಲಬ್ ಸೇರಿದ’ಪ್ರೇಮದ ಊರಲಿ’

ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರ   50 ಕೋಟಿ ರೂ. ಕಲೆಕ್ಷನ್ ಕ್ಲಬ್ ಸೇರಿದೆ.

2.5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ  ಸಿನಿಮಾ , ಬಿಡುಗಡೆಯಾದ 17 ದಿನಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಬಿಡುಗಡೆಯಾದ ಮೊದಲ ದಿನ  9 ಲಕ್ಷ ಗಳಿಸಿದ್ದ ಈ ಚಿತ್ರ, ಪ್ರೇಕ್ಷಕರ ಸಕಾರಾತ್ಮಕ ವಿಮರ್ಶೆಗಳಿಂದಾಗಿ ದಿನದಿಂದ ದಿನಕ್ಕೆ ಪ್ರದರ್ಶನಗಳನ್ನು ಹೆಚ್ಚಿಸಿಕೊಳ್ಳುತ್ತಾ 50 ಕೋಟಿ ಕ್ಲಬ್ ಸೇರಿದೆ.

ಮೊದಲ ದಿನ  ಕೇವಲ 60 ಶೋಗಳ ಪ್ರದರ್ಶನಗಳೊಂದಿಗೆ ತೆರೆಕಂಡಿದ್ದ ‘ಪ್ರೇಮದ ಊರಲಿ’ ಸಿನಿಮಾ,  ಮೌತ್ ಟಾಕ್  ಕಾರಣದಿಂದ  3ನೇ ವಾರದ  1,100 ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುವ ಮಟ್ಟಿಗೆ ಬೆಳೆದಿದೆ.   ಅಕ್ಟೋಬರ್ 11 ರ ಭಾನುವಾರ ಚಿತ್ರ  ದೇಶಾದ್ಯಂತ  8 ಕೋಟಿ   ಕಲೆಕ್ಷನ್ ಮಾಡಿದೆ.

ಚಿತ್ರದಲ್ಲಿ ಶ್ರೀ ರಾಮ್, ತಪಸ್ವಿನಿ ಪೂಣಚ್ಚ ಮತ್ತು ರಾಮಿಕಾ ಶಿವು, , ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿ ಸೊಗಡಿನ ತಂದೆ-ಮಗನ ಬಾಂಧವ್ಯದ ಕಥೆ, ಸುನಾದ್ ಗೌತಮ್ ಅವರ ಸಂಗೀತ ಕುಟುಂಬ ಸಮೇತ ಜನರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!