‘ಪೆದ್ದಿ’ ಪ್ರೋಮೋದಲ್ಲಿ ಶ್ರುತಿ ಹಾಸನ್ ಡ್ಯಾನ್ಸ್ ಧಮಾಕಾ

ಮೆಗಾ ಪವರ್ ಸ್ಟಾರ್ ರಾಮ್ ಚರಣ್  ನಟನೆಯ ‘ಪೆದ್ದಿ’ ಚಿತ್ರದ ‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋದಲ್ಲಿ ರಾಮ್ ಚರಣ್, ಶ್ರುತಿ ಹಾಸನ್, ಜಾನ್ವಿ ಕಪೂರ್ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಪೆದ್ದಿ’ ಜೂನ್ 4ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ.  ‘ಹೆಲ್ಲಲ್ಲಲ್ಲೋ’ ಹಾಡಿನಲ್ಲಿ ರಾಮ್ ಚರಣ್ ಅವರು ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಶ್ರುತಿ ಹಾಸನ್ ಗ್ಲಾಮರಸ್ ಉಡುಪಿನಲ್ಲಿ, ಜಾನ್ವಿ ಕಪೂರ್  ಚಂದದ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಈ ಪ್ರೋಮೋದಿಂದ ಚಿತ್ರದ ಮೇಲಿನ ನಿರೀಕ್ಷೆ  ಹೆಚ್ಚಿದೆ.

ಪ್ರೋಮೋದಲ್ಲಿ ಎ.ಆರ್. ರೆಹಮಾನ್ ಅವರ ವಿಶಿಷ್ಟ ಶೈಲಿಯ ಮ್ಯೂಸಿಕಲ್ ಮ್ಯಾಜಿಕ್,  ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ರಾ ಶೈಲಿಯ ಸಮ್ಮಿಲನ ಎದ್ದು ಕಾಣುತ್ತಿದೆ. ವೇದಿಕೆಯೊಂದರ ಮೇಲೆ ಸುತ್ತುವರಿದ ನೂರಾರು ಜನರ ಮಧ್ಯೆ ಅದ್ದೂರಿಯಾಗಿ ಚಿತ್ರೀಕರಿಸಲಾದ ಈ ಹಾಡಿನಲ್ಲಿ ರಾಮ್ ಚರಣ್, ಶ್ರುತಿ ಹಾಸನ್, ಜಾನ್ವಿ ಕಪೂರ್ ಜೊತೆಯಾಗಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

‘ಹೆಲ್ಲಲ್ಲಲ್ಲೋ’ ಹಾಡಿನ. ಪೂರ್ಣ ಹಾಡನ್ನು ಮೇ 23ರಂದು ಭೋಪಾಲ್‌ನಲ್ಲಿ ನಡೆಯಲಿರುವ ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಹುಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾದ ಪ್ರೀಮಿಯರ್ ಶೋಗಳನ್ನು ಜೂನ್ 3ರಂದೇ  ಆಯೋಜಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!