ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ‘ಪೆದ್ದಿ’ ಚಿತ್ರಕ್ಕೆ ಆಂಧ್ರ ಪ್ರದೇಶ ಸರ್ಕಾರ ವಿಶೇಷ ಪ್ರದರ್ಶನ, ಹೆಚ್ಚುವರಿ ಶೋ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ.
‘ಪೆದ್ದಿ’ ಚಿತ್ರಕ್ಕೆ ಜೂನ್ 3ರಂದು ರಾತ್ರಿ 8 ಗಂಟೆಯಿಂದ ವಿಶೇಷ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ಅವಕಾಶ ನೀಡಲಾಗಿದೆ. ಬಿಡುಗಡೆಯಾದ ಮೊದಲ ವಾರದವರೆಗೆ ಪ್ರತಿದಿನ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳಿಗೆ ಅನುಮತಿ ಸಿಕ್ಕಿದೆ.
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ₹100 ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ₹125 ವರೆಗೆ ಟಿಕೆಟ್ ದರ ಹೆಚ್ಚಿಸಲು ಅವಕಾಶ ನೀಡಲಾಗಿದೆ. ವಿಶೇಷ ಪ್ರೀಮಿಯರ್ ಶೋಗಳ ಟಿಕೆಟ್ ದರವನ್ನು ಗರಿಷ್ಠ ₹600ಕ್ಕೆ ನಿಗದಿಪಡಿಸಲಾಗಿದೆ.
ಬುಚ್ಚಿ ಬಾಬು ಸನಾ ನಿರ್ದೇಶನದ ಗ್ರಾಮೀಣ ಕ್ರೀಡಾ ಆಧಾರಿತ ಆಕ್ಷನ್ ಡ್ರಾಮಾ ‘ಪೆದ್ದಿ’ ಜೂನ್ 4ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಈಗಾಗಲೇ ಟ್ರೈಲರ್ ಹೈಪ್ ಸೃಷ್ಟಿಸಿದೆ.
‘ಪೆದ್ದಿ’ ರಾಮ್ ಚರಣ್, ಜಾನ್ವಿ ಕಪೂರ್, ಶಿವರಾಜ್ಕುಮಾರ್, ಜಗಪತಿ ಬಾಬು ತಾರಾಗಣ ಹೊಂದಿದೆ. ಆಂಧ್ರ ಪ್ರದೇಶ ಸರ್ಕಾರದ ವಿಶೇಷ ಪ್ರದರ್ಶನ, ಹೆಚ್ಚುವರಿ ಶೋ ಹಾಗೂ ಟಿಕೆಟ್ ದರ ಹೆಚ್ಚಳದ ನಿರ್ಧಾರದಿಂದ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಬಲ ಪಡೆದಿದೆ.





Be the first to comment