ಪಾರ್ಥನ್ ಪರ್ಪಂಚ

ಪಾರ್ಥನ್ ಪರ್ಪಂಚ First Look Poster ಬಿಡುಗಡೆ

ಪಾರ್ಥನ್ ಪರ್ಪಂಚ ಚಿತ್ರದ ಶೀರ್ಷಿಕೆಯ ಮೊದಲ ನೋಟ ಇದೀಗ ಬಿಡುಗಡೆಯಾಗಿದೆ.. ಮೊದಲ ನೋಟದ ಪೋಸ್ಟರ್ ಹೇಳುವಂತೆ, ಇದು ಅಪ್ಪಟ ಕೋರ್ಟ್ ಡ್ರಾಮಾದಂತೆ ಸಸ್ಪೆನ್ಸ್ ಥ್ರಿಲ್ಲರ್ ನಂತೆ ಕಾಣ್ತಿದೆ.. ಈ ಪೋಸ್ಟರ್ ವಿನ್ಯಾಸ, ಚಿತ್ರದ ಮೇಲೆ ಬಗೆಬಗೆಯ ಊಹೆ‌ಯನ್ನ ಮೂಡಿಸುತ್ತಿದೆ. ಭಿನ್ನ ದೃಷ್ಟಿ ಕೋನದಲ್ಲಿ ಕಾಣ್ತಿದೆ.

ಪೋಸ್ಟರ್ ನಲ್ಲೇ ಕುತೂಹಲ ಹುಟ್ಟಿಸ್ತಿರೋ, ಪಾರ್ಥನ್ ಪರ್ಪಂಚದ ನಿರ್ದೇಶಕ ಶ್ರೀಹರ್ಷ ಎಂ.ಎನ್. ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಹರ್ಷ ಸ್ವತಃ ಕಥೆ ಬರೆದು ನಿರ್ದೇಶಿಸಿದ್ದಾರೆ. ಪಾರ್ಥನ್ ಪರ್ಪಂಚ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನ ಮಂಜುನಾಥ್ ಜೆ ಅನಿವಾರ್ಯ ಹೊತ್ತಿಕೊಂಡಿದ್ದಾರೆ.

ಸಿರಿ ಸಿನಿಮಾಸ್ ಮೂಲಕ ಸೀತಾ ಹರ್ಷವರ್ಧನ್ ಅವರು ನಿರ್ಮಾಣ‌‌ ಮಾಡುತ್ತಿರುವ ಈ ಚಿತ್ರದಲ್ಲಿ ಅಣ್ಣಯ್ಯ ಖ್ಯಾತಿಯ ವಿಕಾಶ್ , ಮಂದಾರ, ರಂಗಾಯಣ ರಘು,ವಿನಯ ಪ್ರಸಾದ್, ಯಮುನ ಶ್ರೀನಿಧಿ, ಬಾಬು ಹೀರಣ್ಣಯ್ಯ, ಅಮಿತ್, ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಪಾರ್ಥನ್ ಪರ್ಪಂಚಕ್ಕೆ ನಿಪುಣ ತಂತ್ರಜ್ಞರ ಕೈಚಳಕವಿದೆ‌. ಛಾಯಾಗ್ರಾಹಕರಾಗಿ ಜೈ ಆನಂದ್, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರಿನಲ್ಲೇ ನಡೆಯುವಂತಹ ಕಥಾಹಂದರವಿರೋ ಈ ಚಿತ್ರಕ್ಕೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದು, ಚಿತ್ರದಲ್ಲಿ ನಾಲ್ಕು ಭಿನ್ನ ಹಾಡುಗಳಿದ್ದು, ಸದ್ಯದಲ್ಲೇ ಚಿತ್ರದ ಹಾಡುಗಳನ್ನ ಲೋಕಾರ್ಪಣೆ ಮಾಡೋ ಸನ್ನಾಹದಲ್ಲಿದೆ ಚಿತ್ರತಂಡ.

Be the first to comment

Leave a Reply

Your email address will not be published. Required fields are marked *

Translate »
error: Content is protected !!