ಪತಿ ಹುಟ್ಟುಹಬ್ಬಕ್ಕೆ ಅಂಗ ದಾನ ಮಾಡಿದ ಪ್ರಿಯಾ ಸುದೀಪ್‌

ಖ್ಯಾತ ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್‌ ಅವರು ಪತಿ ಹುಟ್ಟುಹಬ್ಬಕ್ಕೆ ಅಂಗ ಮತ್ತು ಅಂಗಾಂಶ ದಾನ ಮಾಡುವ ಮೂಲಕ  ಮಾದರಿಯಾಗಿದ್ದಾರೆ.

ಕಿಚ್ಚ ಸುದೀಪ್ ಅವರು ಸೆ.2ರಂದು ಅಭಿಮಾನಿಗಳೊಂದಿಗೆ 52ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಅಂಗ ಮತ್ತು ಅಂಗಾಂಶಗಳನ್ನು ಪ್ರಿಯಾ ದಾನ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

‘ಪ್ರತಿ ವರ್ಷ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ, ಅಭಿಮಾನಿಗಳು ರಕ್ತದಾನ, ಅನ್ನದಾನ, ಬಡ ಮಕ್ಕಳಿಗೆ ಸಹಾಯ ಸೇರಿ ಇನ್ನಿತರ ಸಮಾಜ ಕಾರ್ಯಗಳನ್ನು ಮಾಡುತ್ತಿದ್ದರು. ಈ ವರ್ಷ ಅವರ ಹುಟ್ಟುಹಬ್ಬಕ್ಕೆ ನಾನು ಅಂಗ ಮತ್ತು ಅಂಗಾಂಶಗಳನ್ನು ದಾನ ಮಾಡಿದ್ದೇನೆ.  ಅಂಗಾಂಗ ದಾನ ಪ್ರಕ್ರಿಯೆ ಬಹಳ ಸುಲಭವಾಗಿದೆ. ನಿಮ್ಮ ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಎಂದರೆ ಅದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ. ನಮ್ಮ ಕಿಚ್ಚ ಸುದೀಪ್‌ ಕೇರ್‌ ಫೌಂಡೇಶನ್‌ ಮೂಲಕ ನಾನು ಅಂಗಾಂಗ ದಾನಕ್ಕೆ ನೋಂದಣಿ ಮಾಡಿದ್ದೇನೆ ಎಂದು ಪ್ರಿಯಾ ಸುದೀಪ್ ತಿಳಿಸಿದ್ದಾರೆ.

‘ಅಂಗ ಮತ್ತು ಅಂಗಾಂಶ ದಾನ ಮಾಡಿ. ಅಂಗಾಂಗ ದಾನ ಮಾಡಲು ನಮ್ಮ ಜವಾಬ್ದಾರಿ- ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಇದಕ್ಕೊಂದು ಅರ್ಥ ಬರುತ್ತದೆ’ ಎಂದು ಪ್ರಿಯಾ ಸುದೀಪ್  ಅಭಿಮಾನಿಗಳಿಗೆ  ಮನವಿ ಮಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!