Olave mandara 2: ಸೆ. 22ಕ್ಕೆ ‘ಒಲವೇ ಮಂದಾರ 2’ ತೆರೆಗೆ

ಎಸ್‌ ಆರ್ ಪಾಟೀಲ್ ನಿರ್ದೇಶನದ ‘ಒಲವೇ ಮಂದಾರ 2’ ಚಿತ್ರ ಸೆಪ್ಟಂಬರ್ 22ರಂದು ಬಿಡುಗಡೆಗೆ ಸಿದ್ಧವಾಗಿದೆ.

ವಿಶಿಷ್ಟ ಪ್ರೇಮಕಥೆಯ ಈ ಚಿತ್ರದ ಬಗ್ಗೆ ನಿರ್ದೇಶಕರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

‘ಪ್ರೀತಿಯನ್ನು ತಪ್ಪಾಗಿ ತಿಳಿದಿರುವ ಪೋಷಕರು, ಪ್ರೀತಿ ಮಾಡುವ ಮಕ್ಕಳನ್ನು ಅಪರಾಧ ಮಾಡಿದವರಂತೆ ನೋಡುತ್ತಾರೆ. ಹೆಣ್ಣುಮಕ್ಕಳನ್ನು ಇನ್ನಷ್ಟು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ. ಚಿತ್ರ ಮಕ್ಕಳ ಆಯ್ಕೆಯನ್ನು ಒಪ್ಪಿಕೊಳ್ಳಬೇಕು ಎನ್ನುವ ಮಹತ್ವದ ವಿಚಾರದ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ. ನಿಜವಾದ ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಹೆತ್ತವರು ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವವರೆಗೂ ಅವರನ್ನು ಒಪ್ಪಿಸುತ್ತಲೇ ಇರಬೇಕು ಎನ್ನುವ ಸಂದೇಶ ಚಿತ್ರದಲ್ಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ರಮೇಶ್ ಮರಗೋಲು ನಿರ್ಮಾಣದ ಒಲವೇ ಮಂದಾರ 2 ಚಿತ್ರದಲ್ಲಿ ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಹಿರಿಯ ನಟಿ ಭವ್ಯಾ, ಡಿಂಗ್ರಿ ನಾಗರಾಜ್ , ಮನು ಶಿವಾನಂದ್ ಸಿಂದಗಿ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಡಾ. ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಕಮರೊಟ್ಟು ಚೆಕ್ ಪೋಸ್ಟ್’ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದ ಸನತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಈ ಚಿತ್ರವು ಜಯತೀರ್ಥ ಅವರ ಒಲವೇ ಮಂದಾರ ಸಿನಿಮಾದ ಮುಂದುವರಿದ ಭಾಗವಲ್ಲ. ಇದೊಂದು ಸಂಪೂರ್ಣ ಭಿನ್ನ ಸಿನಿಮಾ ಆಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

2011ರಲ್ಲಿ ತೆರೆಕಂಡಿದ್ದ ಜಯತೀರ್ಥ ಅವರ ಚೊಚ್ಚಲ ಸಿನಿಮಾ ‘ಒಲವೇ ಮಂದಾರ’ ಜನರ ಮೆಚ್ಚುಗೆ ಗಳಿಸಿತ್ತು. ಸಿನಿಮಾದ ಹಾಡುಗಳು ಜನಪ್ರಿಯತೆ ಪಡೆದಿದ್ದವು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!