ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದೀರ್ಘ ಪತ್ರ ಬರೆದಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಸುದೀಪ್ ತಿಳಿಸಿದ್ದಾರೆ.
ನಿವಾಸದ ಬಳಿ ಅಭಿಮಾನಿಗಳಿಗೆ ಲಭ್ಯವಿರುವುದಿಲ್ಲ. ಹುಟ್ಟುಹಬ್ಬದ ಹೆಸರಿನಲ್ಲಿ ಗದ್ದಲ, ಸಂಭ್ರಮಕ್ಕಿಂತ ತಮ್ಮ ತಮ್ಮ ಊರುಗಳಲ್ಲಿ ಅಭಿಮಾನಿಗಳು ನಡೆಸುವ ಸಾಮಾಜಿಕ ಕಾರ್ಯಗಳೇ ನಿಜವಾದ ಆಚರಣೆ. ಅಭಿಮಾನಿಗಳು ನೀಡುವ ಉಡುಗೊರೆಗಳನ್ನು ಸಮಾಜದ ಒಳಿತಿಗಾಗಿ ಸದ್ವಿನಿಯೋಗ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಚಿತ್ರರಂಗಕ್ಕೆ ತಮ್ಮ 30 ವರ್ಷಗಳ ಪಯಣವನ್ನು ನೆನಪಿಸಿಕೊಂಡಿರುವ ಸುದೀಪ್, ಸಿನಿಮಾ ತಮ್ಮ ಪರಮ ಕಾಯಕ ಎಂದು ಹೇಳಿದ್ದಾರೆ. ಅಭಿಮಾನಿಗಳನ್ನು ರಂಜಿಸುವ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳಿರುವ ಕಿಚ್ಚ ತಾವು ಸುಮ್ಮನೆ ಕುಳಿತಿಲ್ಲ, ಮುಂದಿನ ಬೇಟೆಗೆ ಸಿದ್ಧವಾಗಿದ್ದೇನೆ ಎಂಬ ಅರ್ಥದಲ್ಲಿ ಅಭಿಮಾನಿಗಳಿಗೆ ಸುಳಿವು ನೀಡಿದ್ದಾರೆ.
ಸಿನಿಮಾ, ಬಿಗ್ಬಾಸ್ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ತಮಗೆ ಅಭಿಮಾನಿಗಳು ನೀಡಿರುವ ಪ್ರೀತಿ ಮತ್ತು ಪ್ರೋತ್ಸಾಹವೇ ತಮ್ಮ ಶ್ರೀರಕ್ಷೆ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಅಭಿಮಾನಿಗಳ ಪ್ರೀತಿ ತಮ್ಮೊಂದಿಗೆ ಇದೆ ಎಂದು ಭಾವುಕರಾಗಿದ್ದಾರೆ.
—-





Be the first to comment