ನವರಸ ನಾಯಕ ಜಗ್ಗೇಶ್ ಅಂದರೆ ಸಾಕು, ಚಿತ್ರರಸಿಕರ ಮೊಗದಲ್ಲಿ ನಗು ಅರಳುತ್ತೆ. ರಫ್ ಅಂತ ಅವರ ವಿಚಿತ್ರ ಮ್ಯಾನರಿಸಂ, ವಿಶಿಷ್ಟ ಡೈಲಾಗ್ ಡೆಲಿವರಿ ಮೈಂಡ್ನಲ್ಲಿ ಸ್ಕ್ರೀನ್ ಆಗುತ್ತೆ. ಆದರೆ ಇದೇ ಮೊದಲ ಬಾರಿಗೆ ಜಗ್ಗೇಶ್ ಇದುವರೆಗೂ ನೋಡದಂತಹ ಪಾತ್ರದ ಮೂಲಕ ನಿಮ್ಮೆದುರು ಬರೋಕೆ ಸಜ್ಜಾಗಿದ್ದಾರೆ. ಇಲ್ಲಿ ನಗಿಸೋ ನಾಯಕನ ಕೈಯಲ್ಲಿ ಗನ್ ಇದೆ. ವ್ಯವಸ್ಥೆಯ ವಿರುದ್ಧ ಸಿಡಿದು ನಿಂತ ಆಕ್ರೋಶವಿದೆ.
ಪ್ರತಿಯೊಬ್ಬ ಕಲಾವಿದನಿಗೂ, ತನ್ನಲ್ಲಿರೋ ಕಲಾವಿದನಿಗೆ ಒಂದು ಮಟ್ಟಕ್ಕೆ ತೃಪ್ತಿ ನೀಡುವಂತಹ ಪಾತ್ರ ಮಾಡಬೇಕು ಅನ್ನೋ ಹಪಹಪಿ ಇರುತ್ತದೆ. ನವರಸ ನಾಯಕ ಜಗ್ಗೇಶ್ ಇಲ್ಲಿಯವರೆಗೂ ಬಹುತೇಕ ನಗಿಸೋ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅವರೊಳಗಿನ ಕಲಾವಿದನ ಹಸಿವನ್ನು ನೀಗಿಸೋ ಪಾತ್ರವೊಂದು ‘8ಎಂಎಂ’ ಎಂಬ ಚಿತ್ರದಲ್ಲಿ ಸಿಕ್ಕಿದೆಯಂತೆ. ಅದು ಅವರ ಮಾತಲ್ಲಷ್ಟೇ ಅಲ್ಲ, ನಮಗೂ ಟೀಸರ್, ಫಸ್ಟ್ಲುಕ್ ರೂಪದಲ್ಲಿಯೇ ಕಾಣಿಸುತ್ತದೆ.ಜಗ್ಗೇಶ್ರನ್ನ ಈ ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾಗಿ ಕಾಣಬಹುದು. ಇಷ್ಟು ದಿನ ಚಿತ್ರರಸಿಕರನ್ನ ಕಚಗುಳಿ ಇಡೋ ಕಾಮಿಡಿಯಿಂದ ನಗಿಸೋ ಪಾಸಿಟಿವ್ ಪಾತ್ರದಲ್ಲಿ ಅಭಿನಯಿಸಿದ್ದ ಜಗ್ಗೇಶ್, ಈ ಬಾರಿ ಪಕ್ಕಾ ನೆಗೆಟಿವ್ ಶೇಡ್ನಲ್ಲಿ ತೆರೆ ಮೇಲೆ ರಾರಾಜಿಸಲಿದ್ದಾರೆ.
Be the first to comment