ಇದು ದೇಶಿ ಹುಡುಗರ ಮಾಡರ್ನ್ ಸ್ಟೈಲ್ ಸಿನಿಮಾ ನಾವೆಲ್ರೂ ಹಾಫ್ ಬೈಲ್ ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಹೊಸ ರೀತಿಯ ಕಥೆ, ಸಂಭಾಷೆ ಹಾಗೂ ಸಂಗೀತದ ಹೊನಲು ಹೊತ್ತುಕೊಂಡು ಫುಲ್ ಪ್ಯಾಕೇಜ್ ಮೂಲಕ ಜನವರಿ ೨೪ಕ್ಕೆ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಪಾತ್ರಗಳು ಮತ್ತು ಭಾವನಾತ್ಮಕ ಸನ್ನಿವೇಶ ಈ ಸಿನಿಮಾದ ಜೀವಳವಾಗಿದೆಯಂತೆ.
ಸಿನಿಮಾದ ಟೈಟಲ್ ವಿಶೇಷವಾದ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಬಿ.ಶಿವರಾಜ್ ವೆಂಕಟಾಚ್ಚ ಅವರ ಚೊಚ್ಚಲ ಸಿನಿಮಾ ಇದಾಗಿದೆ. ಅನುಗ್ರಹ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ನಾವೆಲ್ರೂ ಹಾಫ್ ಬಾಯಿಲ್ಡ್ ಸಿನಿಮಾಕ್ಕೆ ಅಮೀರ್ ಅಹಮದ್ ಬಂಡವಾಳ ಹಾಕಿದ್ದಾರೆ. ನಿರ್ದೇಶಕ ಬಿ.ಶೀವರಾಜ್ ಕಥೆ, ಚಿತ್ರ ಕಥೆ ಬರೆದು, ನಿರ್ದೇಶನ ಮಾಡಿದ್ದು ಫುಲ್ ಕಾಮಿಡಿ ಪ್ಯಾಕೇಜ್ ಸಿನಿಮಾವನ್ನು ಹೊಸ ವರ್ಷದ ಮೊದಲ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರ ನಿರ್ಮಾಣ ಮಾಡಬೇಕು ಅಂದುಕೊAಡಿದ್ದ ನಿರ್ಮಾಪಕ ಅಮೀರ್ ಅಹಮದ್ ಗೆ ನಾವೆಲ್ರೂ ಹಾಫ್ ಬಾಯಿಲ್ಡ್ ಸಿನಿಮಾ ತಂಡ ಸಿಕ್ಕಿದ್ದೆ ಒಂದು ರೀತಿಯ ವಿಶೇಷ. ದಾವಣಗೆರೆ ಕಾರ್ ವರ್ಕ್ ಶಾಪ್ ನಲ್ಲಿ ನಿರ್ದೇಶಕ ಮತ್ತು ಚಿತ್ರದ ನಾಯಕ ನಟರು ಚಿತ್ರೀಕರಣಕ್ಕೆಂದು ಬಂದಿದ್ದರು. ಅದೇ ಸಮಯದಲ್ಲಿ ಚಿತ್ರೀಕರಣಕ್ಕೆ ಹಣ ನೀಡುತ್ತೇನೆ ಎಂದು ಹೇಳಿದ ಮಾಜಿ ನಿರ್ಮಾಪಕ ಕಾಲ್ ಪಿಕ್ ಮಾಡದೆ ಇದ್ದದ್ದು ನಿರ್ದೇಶಕರಿಗೆ ತಲೆ ನೋವು ತರಿಸಿತ್ತು.
ಸಿನಿಮಾದ ಚಿತ್ರೀಕರಣಕ್ಕೆಂದು ಫುಲ್ ರೆಡಿಯಾಗಿ ಬಂದಿರುವ ಇಡೀ ಟೀಮ್ ಗೇ ಆ ದಿನ ದೊಡ್ಡ ಶಾಕ್ ಆಗಿತ್ತು. ಅದೇ ಸಮಯಕ್ಕೆ ಅಚಾನಾಕ್ ಆಗಿ ನಿರ್ಮಾಪಕ ಅಮೀರ್ ಕೈ ಗೆ ಈ ಹುಡುಗರು ಸಿಗುತ್ತಾರೆ. ಅಲ್ಲಿ ತಮ್ಮ ವಿಚಾರವನ್ನು ಹೇಳಿಕೊಂಡ ಹುಡುಗರಿಗೆ ಅಮೀರ್ ಸಾಥ್ ಕೊಟ್ಟು ಸಿನಿಮಾ ಸಿರ್ಮಾಣದಲ್ಲಿ ಸೈ ಎನಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ತಬಲಾ ನಾಣಿ ಸಂಭಾಷಣೆ ಬರೆದಿರುವುದು ಇನ್ನೊಂದು ವಿಶೇಷ. ಮುಖ್ಯ ಭೂಮಿಕೆಯಲ್ಲಿ ದೇವದಾಸ್ ಕಾಪಿಕಾಡ್, ಕರಿಸುಬ್ಬು, ಮಜಾ ಟಾಕೀಸ್ ಪವನ್, ಹಿರಿಯ ನಟ ಉಮೇಶ್ ಅಭಿನಯಿಸಿದ್ದಾರೆ ಹಾಗೂ ಇದರಲ್ಲಿ ನಾಲ್ಕು ಜನ ನಾಯಕ ನಟರು ಕಾಣಿಸಿಕೊಂಡಿದ್ದು, ನಟರಾದ ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ನಟಿಸಿದ್ದಾರೆ. ನಾಯಕಿಯರಾಗಿ ಮಾತಂಗಿ ಪ್ರಸನ್ನ, ಅವಿನ್ಯ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ರಮೇಶ್ ಕುಶಂಧರ್ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ ಬಾಹುಬಲಿ, ಮಗಧೀರ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ನಟರಿಗೆ ಹೆಜ್ಜೆ ಹಾಕಿಸಿದ್ದಾರೆ. ಪಡ್ಡೆಗಳ ನಿದ್ದೆಗೆಡಿಸಲು ಫುಲ್ ಬೆಂದ ನಂತರ ಉಪ್ಪು ಖಾರ ಹಾಕಿದ ಹಾಫ್ ಬಾಯಿಲ್ಡ್ ಇದೇ ಜನವರಿ ೨೪ರಂದು ಬಿಡುಗಡೆಯಾಗಲಿದೆ. ಕನ್ನಡದ ಕಾಮಿಡಿ ಸಿನಿಮಾ ಪಟ್ಟಿಗೆ ಈ ಸಿನಿಮಾ ಸೇರುವುದರಲ್ಲಿ ಎರಡು ಮಾತಿಲ್ಲ.
Pingback: Digital transformation