ಮೋಡ ಕವಿದ ವಾತಾವರಣ

‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

ಸಿಂಪಲ್ ಸುನಿ ಸಾರಥ್ಯದಲ್ಲಿ‌ ಮೂಡಿ ಬಂದಿರುವ ಮೋಡ ಕವಿದ ವಾತಾವರಣ ಸಿನಿಮಾ ಟೈಟಲ್ ಹಾಗೂ ತನ್ನ ಕಂಟೆಂಟ್ ನಿಂದ ಗಾಂಧಿನಗರದಲ್ಲಿ‌ ನಿರೀಕ್ಷೆ ಹೆಚ್ಚು ಮಾಡಿದೆ. ಜೂನ್ ತಿಂಗಳ 26 ರಂದು ಈ ಚಿತ್ರ ತೆರೆಗೆ ಬರ್ತಿದ್ದು, ಇದೀಗ ಸಿನಿಮಾ‌ ಸೆನ್ಸಾರ್ ಪಾಸಾಗಿದೆ.‌‌ ಮೋಡ‌‌ ಕವಿದ ವಾತಾವರಣ ಚಿತ್ರಕ್ಕೆ ಸೆನ್ಸಾರ್ ಮಂಡಲಿ ಯು/ಎ ಪ್ರಮಾಣ ಪತ್ರ ಕೊಟ್ಟಿದೆ. ಯಾವುದೇ ಕಟ್ ಇಲ್ವೆ ಮ್ಯೂಟ್ ಇಲ್ಲದೇ ಕ್ಲಿಯರ್ ಆದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

ಮೋಡ ಕವಿದ ವಾತಾವರಣದಲ್ಲಿ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಈ ಸಿನಿಮಾ ನಾಯಕ. ಶೀಲಮ್‌ ಅವರು ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ʼಮೋಡ ಕವಿದ ವಾತಾವರಣʼದ ಮೂಲಕ‌ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.

ಹದಿಹರೆಯದ gen -G ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.’ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಅವರೆ ಈ ಸಿನಿಮಾ ನಿರ್ಮಾಣ ಮಾಡಿದೆ.ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.

ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ ಸಿನಿಮಾಗಿದೆ. ಈಗಾಗಲೇ ಸಂಜಿತ್ ಹೆಗಡೆ ಹಾಡಿರುವ ʼನನ್ನೆದೆಯ ಹಾಡೊಂದನುʼ ಹಾಗು ಸಂಗೀತ ಹಾಡಿರುವ ಯಯಾತಿ ಜನಮನ್ನಣೆ ಗಳಿಸಿದೆ. ಸರೆಗಮ ಒಳ್ಳೆ ಮೊತ್ತಕ್ಕೆ ಆಡಿಯೋ ಹಕ್ಕನ್ನು ತನ್ನದಾಗಿಸಿಕೊಂಡಿದೆ.

ಚಿತ್ರ ಜೂನ್ 26ರಂದು ಬಿಡುಗಡೆಯಾಗಲಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!