‘ಮಂಡ್ಯ ಹೈದ’ ಚಿತ್ರದ ಎರಡನೇಯ ಹಾಡು ಬಿಡುಗಡೆ ; ಅದ್ಧುರಿಯಾಗಿ ನಡಿತು ಅಭಯ್ ಹುಟ್ಟುಹಬ್ಬ

ನಟ ಅಭಯ್‌ ಚಂದ್ರಶೇಖರ್‌ ನಟನೆಯ ಎರಡನೇ ಸಿನಿಮಾ ದ ಎರಡನೆಯ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ಹಾಗೂ ಟೈಟಲ್‌ ಹಾಡು ಹಿಟ್ಟ್ ಲಿಸ್ಟ್ ಸೇರಿದೆ.

ಅಭಯ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದ ಆಟೋ ಚಾಲಕರು ಸಮಾರಂಭ ಏರ್ಪಡಿಸಿ ಸಂಭ್ರಮಿಸಿದ್ದಾರೆ.

ಎಸ್‌. ಚಂದ್ರಶೇಖರ್‌ ನಿರ್ಮಾಣದ ಐದನೇ ಚಿತ್ರ ಇದಾಗಿದೆ. ನಾಯಕ ಅಭಯ್, ಈ ಚಿತ್ರದಲ್ಲಿ ‘ಶಿವ’ ಹೆಸರಿನ ಮಂಡ್ಯ ಹುಡುಗನಾಗಿ ನಟಿಸಿದ್ದು, ಹಳ್ಳಿ ಹುಡುಗಿಯಾಗಿ ಭೂಮಿಕಾ ನಟಿಸಿದ್ದಾರೆ. ‘ಇದೊಂದು ಹಳ್ಳಿ ಬ್ಯಾಕ್‌ಡ್ರಾಪ್‌ನ ಸಿನಿಮಾ. ನಾಯಕ ಪ್ರೀತಿ ಬಲೆಗೆ ಬೀಳುತ್ತಾನೆ. ಆ ಪ್ರೀತಿ ಪಡೆಯಲು ಸಾಯುತ್ತಾನೆಯೇ? ಸಾಯಿಸುತ್ತಾನೆಯೇ ಎನ್ನುವುದು ಚಿತ್ರದ ಎಳೆ. ಎಲ್ಲ ಕಮರ್ಷಿಯಲ್‌ ಸಿನಿಮಾದ ಅಂಶಗಳು ಈ ಸಿನಿಮಾದಲ್ಲಿವೆ.

ಚಿತ್ರಕ್ಕೆ ಕ್ಯಾಪ್ಟನ್‌ ಕಿಶೋರ್‌ ನೃತ್ಯ ನಿರ್ದೇಶನವಿದೆ. ಸಾಹಸ ದೃಶ್ಯಗಳು ಚಿತ್ರದ ಹೈಲೈಟ್‌. ಥ್ರಿಲ್ಲರ್‌ ಮಂಜು ಅವರ ಸಾಹಸ ನಿರ್ದೇಶನದಲ್ಲಿ ಇವುಗಳು ಮೂಡಿಬಂದಿದೆ.

ಮನುಗೌಡ ಛಾಯಾಗ್ರಹಣವಿದೆ. ಬ.ಲ.ರಾಜವಾಡಿ, ಸುನಂದ ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಕಥೆಗೆ ತಿರುವು ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!