IFMA : ಚಿತ್ರರಂಗದ ಒಳಿತಿಗಾಗಿ ಐಎಫ್ ಎಂ ಎ ಸಂಸ್ಥೆ

ಪ್ರಸಕ್ತ ಚಿತ್ರರಂಗವು ಸಂಕಷ್ಟದಲ್ಲಿದೆ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಇದರಿಂದ ನಿರ್ಮಾಣವಾಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಸಿನಿಮಾರಂಗಕ್ಕೆ ಅನುಕೂಲವಾಗಲೆಂದೇ ’ಐಎಫ್ಎಂಎ’ (ಇಂಡಿಯನ್ ಫಿಲಂ makers ಅಸೋಸಿಯೇಷನ್) ಶಾಖಾ ಸಂಸ್ಥೆಯೊಂದು ಕನ್ನಡಿಗ H.R.Dilipkumar ಸಾರಥ್ಯದಲ್ಲಿ ತೆರೆದುಕೊಂಡಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಚೇರಿ ಉದ್ಗಾಟನೆ ಮತ್ತು website (www.ifma.in) ಲೋಕಾರ್ಪಣೆ ಸಮಾರಂಭವು ಅದ್ದೂರಿಯಾಗಿ ನಡೆಯಿತು.

ನವಶಕ್ತಿ ಪೀಠದ ಡಾ.ಶ್ರೀಶ್ರೀ ಭಗವಾನ್ ವಿಷ್ಣುದತ್ತ ಗುರೂಜಿ, ನಟ,ನಿರ್ದೇಶಕ,ಸಾಹಿತಿ ವಿ.ಮನೋಹರ್ ಹಾಗೂ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯು ಒದಗಿಸುತ್ತಿರುವ ಸೇವೆಗಳನ್ನು ಚಿತ್ರರಂಗದವರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿ.ಮನೋಹರ್ ಹಾಗೂ ಡಾ.ವಿ.ನಾಗೇಂದ್ರಪ್ರಸಾದ್ ಕೋರಿಕೊಂಡರು.
ಐಎಫ್ಎಂಎ ಸಂಸ್ಥೆಯ ಕೇಂದ್ರಕಚೇರಿ ತೆಲಂಗಾಣದಲ್ಲಿದ್ದು, ಇಂದು 12 ರಾಜ್ಯಗಳಲ್ಲಿ 9 ಕೇಂದ್ರಗಳು ಪ್ರಾರಂಭಗೊಂಡಿದೆ. ಇದರಲ್ಲಿ ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಘರು ನೊಂದಣಿ ಮಾಡಿಸಬಹುದಾಗಿದೆ.

ನಿಯಮಾನುಸಾರ ನಿರ್ಮಾಪಕರುಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿಸಿ ಕೊಡಲಾಗುವುದು. ವಾರದಲ್ಲಿ ಬಿಡುಗಡೆಯಾದ ಒಂದು ಕನ್ನಡ ಚಿತ್ರವನ್ನು ಆಯ್ಕೆ ಮಾಡಿಕೊಂಡು ಐದು ಸಾವಿರ ಟಿಕೆಟ್ ಖರೀದಿ ಮಾಡಲಾಗುತ್ತದೆ. ಓಟಿಟಿ, ಡಬ್ಬಿಂಗ್, ಆಡಿಯೋ, ವಿತರಣೆ ಇನ್ನು ಮುಂತಾದ ಸೇವೆಗಳನ್ನು ನೀಡಲಾಗಿ ನಿರ್ಮಾಪಕರಿಗೆ ಆಸರೆಯಾಗಿ ನಿಲ್ಲುತ್ತದೆ. ಅಮೆಜಾನ್ ಪ್ರೈಮ್, Netflix ಅಧಿಕಾರಿಗಳೊಂದಿಗೆ ನಿರ್ಮಾಪಕರನ್ನು ಭೇಟಿ ಮಾಡಿಸಿ ವ್ಯವಹಾರ ಮಾಡಿಕೊಡಲಾಗುತ್ತದೆ. ಇದಕ್ಕೆ ಸಂಸ್ಥೆಯು ಯಾವುದೇ ರೀತಿಯ ದಲ್ಲಾಳಿ ಶುಲ್ಕ ಪಡೆಯುವುದಿಲ್ಲ.
ಅಲ್ಲದೆ ಸಂಸ್ಥೆಯು ಮೊದಲ ಪ್ರಯತ್ನ ಎನ್ನುವಂತೆ ’ವೋಲ್ಸೇಲ್ ಬ್ಯಾಸ್ಕೆಟ್ ಗ್ರೂಪ್ಸ್’ ಸಹಭಾಗಿತ್ವದೊಂದಿಗೆ ’ಶ್ರೀ ಮೂಕಾಂಬಿಕಾ ರೇಷನ್ ಕಿಟ್’ ಹಾಗೂ ’ಶ್ರೀ ಸ್ಟಾರ್ ಗೋಲ್ಡ್’ ಅಡಿಯಲ್ಲಿ ಕಲಾವಿದರು, ತಂತ್ರಜ್ಘರಿಗೆ ಅತಿ ಕಡಿಮೆ ಬೆಲೆಯಲ್ಲಿ ದಿನಸಿ ಸಾಮಾನುಗಳನ್ನು ಉಚಿತವಾಗಿ ಸರಬರಾಜು ಮಾಡಲು ಯೋಜನೆ ರೂಪಿಸಿಕೊಂಡಿದೆ.

ನಿರ್ದೇಶಕರುಗಳಾದ ಬುಕ್ಕಾಪಟ್ಟಣವಾಸು, ಮಾ.ಚಂದ್ರು, ಸೋಷಿಯಲ್ ಮೀಡಿಯಾ ಅಧ್ಯಕ್ಷರು, ನಿರ್ಮಾಪಕರು, ನಿರ್ದೇಶಕರು ಈ ಶುಭ ಸಂದರ್ಭದಲ್ಲಿ ಉಪಸ್ತಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!