ಮಲೆನಾಡಿನ ಸಕಲೇಶಪುರದ ಸ ಕೃಷ್ಣ ಸುಂದರಿ ಸಂಹಿತಾ ವಿನ್ಯಾ ಸಿನಿಮಾ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈ ಬೆಡಗಿ ಸದಾ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಚಟುವಟಿಕೆ ಸ್ತಬ್ಧವಾಗಿದೆ.ಎಲ್ಲ ಕ್ಷೇತ್ರಗಳು ಕಂಗಾಲಾಗಿದೆ. ಇದರ ನಡುವೆ ನಟಿ ಸಂಹಿತಾ ರನ್ನ ಮಾತನಾಡಿಸಿದಾಗ ಜೀವನದಲ್ಲಿ ಆಸೆ , ಆಸಕ್ತಿ ಎರಡು ಬಹಳ ಮುಖ್ಯ . ನಾನು ಮೂಲತಃ ಸಕಲೇಶಪುರದ ಹುಡುಗಿ , ಸುಮಾರು 4 ವರ್ಷಗಳ ಹಿಂದೆ ಮಲೆನಾಡು ಭಾಗದಿಂದ ಬೆಂಗಳೂರಿತ್ತ ಬಂದೆ. ಸಿನಿಮಾ ಕ್ಷೇತ್ರದ ಜತೆಗೆ ಮಾಡೆಲಿಂಗ್ ಜಗತ್ತು ಕೂಡ ನನ್ನನ್ನು ಸೆಳೆಯಿತು ಎಂದರು.ಪ್ರಸ್ತುತ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿರುವ ಫಾರ್ ಎವರ್ ನವೀನ್ಕುಮಾರ್ ಅವರ ಕಂಪೆನಿಯಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಮಾಡುತ್ತಾ ಇಲ್ಲಿಯವರೆಗೂ ಸುಮಾರು 35 ಶೋಗಳಲ್ಲಿ ಕಾಣಿಸಿಕೊಂಡು ರ್ಯಾಂಪ್ ಮೇಲೆ ಕ್ಯಾಟ್ವಾಕ್ ಮಾಡುವ ಮೂಲಕ ಶೋ ಸ್ಟಾಪರ್ ಆಗಿ ಗಮನ ಸೆಳೆದಿದ್ದಾರೆ.ಗೌಡ್ರು ದರ್ಬಾರ್ ಚಿತ್ರದಲ್ಲಿ ಮೊದಲು ಅಭಿನಯಿಸಿದ್ದರೂ ಶಶಾಂಕ್ರಾಜ್ ನಿರ್ದೇಶನದ ಹಾಲು-ತುಪ್ಪ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಗಮನ ಸೆಳೆದರು. ಈ ಬೆಡಗಿಗೆ ಒಂದರ ಹಿಂದೆ ಒಂದರಂತೆ ಅದೃಷ್ಟದ ಬಾಗಿಲು ತೆರೆಯುತ್ತ ಹೋಯಿತು. ವಿಷ್ಣು ಸರ್ಕಲ್, ಅಮೃತ ಘಳಿಗೆ, ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ ಈ ಬೆಡಗಿ ಮತ್ತಷ್ಟು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಬಹಳ ಬೋಲ್ಡ್ ಆಗಿರುವ ಹುಡುಗಿ ಕಥೆಗೆ ಹೊಂದುವಂತಹ ಪಾತ್ರ ಇದ್ದರೆ ಖಂಡಿತ ಅಭಿನಯಿಸಲು ಸದಾ ಸಿದ್ಧ ಎನ್ನುತ್ತಾರೆ. ಈಗ ಲಾಕ್ಡೌನ್ ಸಮಯವಾಗಿದ್ದು, ಮನೆಯಿಂದ ಹೊರಬರದ ಈ ನಟಿ ಹಲವಾರು ಕೆಲಸಗಳನ್ನು ಕಲಿತಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವುದರ ಜತೆಗೆ ಪುಸ್ತಕಗಳನ್ನು ಓದುವುದು, ತಮ್ಮ ನೆಚ್ಚಿನ ಚಿತ್ರಗಳ ಸಂಭಾಷಣೆಯನ್ನು ಮತ್ತೆ ಹೇಳುವುದು ಅದರ ಜೊತೆಗೆ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಇದಲ್ಲದೆ, ಕೆಲವು ಫೋಟೋ ಶೂಟ್ಗಳಲ್ಲೂ ಕೂಡ ಭಾಗಿಯಾಗಿದ್ದು, ವಾಹಿನಿಗಳ ಸಂದರ್ಶನ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಒಲವು ಹೊಂದಿರುವ ಈ ಬೆಡಗಿ ಪ್ರೇಕ್ಷಕರ ಮನಸ್ಸಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಅಪ್ಪಟ ಕನ್ನಡ ಪ್ರತಿಭೆಯಾದ ಈ ಬೆಡಗಿಗೆ ಕನ್ನಡದ ನಿರ್ಮಾಪಕರು ಉತ್ತಮ ಅವಕಾಶಗಳು ನೀಡುವ ಜೊತೆಗೆ ಪ್ರತಿಭಾನ್ವಿತರನ್ನು ಬೆಳೆಸಬೇಕು ಎಂಬುದು ನಮ್ಮ ಆಶಯ.
Pingback: Auto Glass Anytime Jackson
Pingback: 여우코믹스