Harshika poonacha : ಕೊಡಗಿನ ಕುವರಿಯ ಲುಕ್ ಗೆ ಕ್ಲೀನ್ ಬೋಲ್ಡ್ !

ಸ್ಯಾಂಡಲ್ ವುಡ್‌ ನಟಿ ಹರ್ಷಿಕಾ ಪೂಣಚ್ಚ ಫಿಲಂ ಫೇರ್‌ ಅವಾರ್ಡ್ 2022 ನಲ್ಲಿ ತಮ್ಮ ವಿಭಿನ್ನ ಡ್ರೆಸ್ ಮೂಲಕ ನೋಡುಗರ ಗಮನ ಸೆಳೆದರು. ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋಸ್ ನೋಡಿದ ಫ್ಯಾನ್ಸ್ ಅಪರೂಪದ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

ಕೊಡಗಿನ ಕುವರಿಯ ಹರ್ಷಿಕಾ ಪೂಣಚ್ಚ, ವಿಶೇಷ ಬಟ್ಟೆ ತೊಟ್ಟು ಇಡೀ ಫಿಲ್ಮಂ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಿಂಚಿದರು.

ಬೆಂಗಳೂರಿನಲ್ಲಿ ನಡೆದ 67 ನೇ ಫಿಲ್ಮಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಹರ್ಷಿಕಾ ಹಾಟ್ ಡ್ರೆಸ್ ನಲ್ಲಿ ಮಿಂಚಿದರು.

ಬ್ಯೂಟಿ ಜೊತೆ ಪ್ರತಿಭೆ ಇರುವ ನಟಿ ಹರ್ಷಿಕಾ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಪ್ರಯೋಗಾತ್ಮಕ ಪಾತ್ರಗಳ ಮೂಲಕ ಕಾಣಿಸಿಕೊಳ್ಳುವ ಈ ನಟಿ, ಇದೀಗ ವೆಬ್ ಸಿರೀಸ್ ನತ್ತ ಮುಖ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮದುವೆ ವಿಚಾರ ಆಗಾಗ್ಗೆ ಸ್ಯಾಂಡಲ್ ವುಡ್ ನಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತದೆ. 

ಹರ್ಷಿಕಾ ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂ, ಕೊಂಕಣಿ, ಕೊಡವ,  ಭೋಜಪುರಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!