ಅಶ್ವಿನ್ ಕುಮಾರ್ ನಿರ್ದೇಶನದ ಅನಿಮೇಟೆಡ್ ಚಿತ್ರ ‘ಮಹಾವತಾರ ನರಸಿಂಹ’ವನ್ನು ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದ ಅಡಿಯಲ್ಲಿ ಆಸ್ಕರ್ ಪ್ರಶಸ್ತಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ರಾಜ ಹಿರಣ್ಯಕಶಿಪು ಮತ್ತು ಆತನ ಮಗ ಭಕ್ತ ಪ್ರಹ್ಲಾದನ ಕಥೆಯನ್ನು ಹೇಳುವ ‘ಮಹಾವತಾರ ನರಸಿಂಹ ಪೌರಾಣಿಕ ಕಥೆಯಾಗಿದೆ. ಈ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾದ 35 ಚಿತ್ರಗಳಲ್ಲಿ ಇದು ಒಂದಾಗಿದೆ. ಈ ವಿಭಾಗದಲ್ಲಿ ದಿ ಬ್ಯಾಡ್ ಗೈಸ್ 2, ಝೂಟೋಪಿಯಾ 2, ಡೆಮನ್ ಸ್ಲೇಯರ್: ಕಿಮೆಟ್ಸು ನೋ ಯೈಬಾ ಇನ್ಫಿನಿಟಿ ಕ್ಯಾಸಲ್, ಕೆಪಾಪ್ ಡೆಮನ್ ಹಂಟರ್ಸ್, ದಿ ಸ್ಪಾಂಜ್‌ಬಾಬ್ ಮೂವಿ: ಸರ್ಚ್ ಫಾರ್ ಸ್ಕ್ವೇರ್‌ಪ್ಯಾಂಟ್ಸ್ ಮತ್ತು ದಿ ಟ್ವಿಟ್ಸ್ ಶಾರ್ಟ್‌ಲಿಸ್ಟ್ ಆಗಿವೆ.
ಮಹಾವತಾರ ನರಸಿಂಹ’ ಜುಲೈ 25 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನಂತರ ಜುಲೈ 31 ರಿಂದ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಯುರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ತೆರೆಕಂಡಿತು. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
98ನೇ ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಜನವರಿ 22 ರಂದು ಘೋಷಿಸಲಾಗುವುದು. ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಮಾರ್ಚ್ 15 ರಂದು ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
—–





Be the first to comment