‘ಲಕ್ಕಿ ಮ್ಯಾನ್‌’ ಗೆ ಸೆನ್ಸಾರ್ ಸರ್ಟಿಫಿಕೇಟ್

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್‌’ಗೆ ಸೆನ್ಸಾರ್ ಮಂಡಳಿ ‘ಯು/ಎ’ ಸರ್ಟಿಫಿಕೇಟ್ ನೀಡಿದೆ.

ಪ್ರಭುದೇವ ಅವರ ಸೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್‌ ನಟಿಸಿದ್ದಾರೆ. ಚಿತ್ರದಲ್ಲಿ ದೇವರಾಗಿ ಪುನೀತ್ ರಾಜ್‌ಕುಮಾರ್‌ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಪ್ರಭುದೇವ ಹಾಗೂ ಪುನೀತ್‌ ಅವರು ಒಂದು ಹಾಡಿಗೆ ಜತೆಯಾಗಿ ಹೆಜ್ಜೆ ಹಾಕಿದ್ದಾರೆ. ರಾಜ್ಯಾದ್ಯಾಂತ ಸೆ.9ರಂದು ಅದ್ದೂರಿಯಾಗಿ ಚಿತ್ರ ತೆರೆಗೆ ಬರುತ್ತಿದೆ.

ಇತ್ತೀಚೆಗೆ ಚಿತ್ರದ ಟ್ರೇಲರ್‌ ಹಾಗೂ ಆಡಿಯೋ ಬಿಡುಗಡೆ ಆಗಿದೆ. ರಿಲೀಸ್ ಆಗಿರುವ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಹೇಳಿರುವ ಡೈಲಾಗ್ ವೈರಲ್ ಆಗಿದೆ. ನಿನ್ನ ಲೈಫ್‌ನಲ್ಲಿ ಆಗಿರುವ ಮಿಸ್ಟೇಕ್‌ಗಳನ್ನು ಸರಿಮಾಡಿಕೊಳ್ಳಲು ನಿನಗೆ ಸೆಕೆಂಡ್ ಚಾನ್ಸ್ ಕೊಡ್ತೀನಿ’ ಎಂದು ಹೇಳಿರುವ ಡೈಲಾಗ್ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

ಈ ಚಿತ್ರವನ್ನು ಪಾರ್ಸಾ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಪಿಆರ್‌ ಮೀನಾಕ್ಷಿ ಸುಂದರಂ ಮತ್ತು ಆರ್‌ ಸುಂದರ ಕಾಮರಾಜ್‌ ಅವರು ನಿರ್ಮಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!