ಲವ್ ಮಾಕ್ಟೇಲ್ 3’ ಗೆ ಸೂಪರ್ ಹಿಟ್ ಪಟ್ಟ

ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ ‘ಲವ್ ಮಾಕ್ಟೇಲ್ 3’ ಚಿತ್ರ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿದೆ.

ಮಾರ್ಚ್ 19ರಂದು ಬಿಡುಗಡೆಯಾದ ಲವ್ ಮಾಕ್ಟೇಲ್ 3, ಧುರಂಧರ್ 2 ಚಿತ್ರದ ಎದುರು ಬಿಡುಗಡೆಯಾಗಿ ಯಶಸ್ವಿ ಎನಿಸಿದೆ. ಚಿತ್ರ 25 ದಿನಗಳ ಯಶಸ್ವಿ ಪ್ರದರ್ಶನದೊಂದಿಗೆ 2026ರಲ್ಲಿ ಸೂಪರ್ ಹಿಟ್ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬಗ್ಗೆ ಡಾರ್ಲಿಂಗ್ ಕೃಷ್ಣ ಅವರು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಅವರು ‘ಲವ್ ಮಾಕ್ಟೇಲ್’ ಸರಣಿಯ ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಕೃಷ್ಣ ಅವರು ‘ಕ್ರಿಸ್ಮಿ’ ಬ್ಯಾನರ್ ಅಡಿಯಲ್ಲಿ ಮಿಲನಾ ನಾಗರಾಜ್ ಜೊತೆಗೂಡಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೇಚಲ್ ಡೇವಿಡ್, ಶ್ವೇತಾ ಪ್ರಸಾದ್, ನಯೇರಾ, ಜಗದೀಶ್, ಗಿರಿರಾಜ್, ಅಭಿಲಾಶ್, ದಳಪತಿ ಇತರರು ನಟಿಸಿದ್ದಾರೆ.

ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದಾರೆ.

ಚಿತ್ರ ಮೊದಲ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೇ ವೇಳೆ ಕಥೆ ಕದ್ದ ಆರೋಪ ಕೂಡ ಚಿತ್ರತಂಡದ ಮೇಲೆ ಬಂದಿತ್ತು. ಆದರೆ ಅಂತಿಮವಾಗಿ ಫಿಲಂ ಚೇಂಬರ್ ಮಧ್ಯಸ್ಥಿಕೆಯಿಂದ ಈ ಆರೋಪವನ್ನು ಬಗೆಹರಿಸಲಾಯಿತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!