ಕೂಲಿʼ ಚಿತ್ರತಂಡಕ್ಕೆ ಇಳಯರಾಜ ನೋಟಿಸ್

ಸೂಪರ್‌ಸ್ಟಾರ್ ರಜನಿಕಾಂತ್ 171ನೇ ಸಿನಿಮಾ ‘ಕೂಲಿ’ ಚಿತ್ರತಂಡಕ್ಕೆ ಸಂಗೀತ ನಿರ್ದೇಶಕ ಇಳಯರಾಜ ನೋಟಿಸ್ ಕಳುಹಿಸಿದ್ದಾರೆ.

ಇಳಯರಾಜ ಕಂಪೋಸ್ ಮಾಡಿದ್ದ ಹಾಡಿನ ತುಣುಕನ್ನು ಬಳಸಿಕೊಂಡಿದ್ದಾರೆಂದು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಲಾಗಿದೆ. ಇದರಿಂದ ಚಿತ್ರತಂಡ ಕಾನೂನು ಸಮಸ್ಯೆ ಎದುರಿಸುತ್ತಿದೆ.

ʻಕೂಲಿʼ ಸಿನಿಮಾ ತಂಡ 1983ರ ʻತಂಗ ಮಗನ್ʼ ಚಿತ್ರದ ʻವಾ ವಾ ಪಕ್ಕಂ ವಾʼ ಹಾಡನ್ನು ಅನುಮತಿ ಪಡೆಯದೆ ಬಳಸಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ. ಈ ಸಿನಿಮಾ ಟೈಟಲ್ ಟೀಸರ್‌ ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಇಳಯರಾಜ ಟ್ಯೂನ್ ಹಾಕಿದ ಹಾಡನ್ನು ನೆಟ್ಟಿಗರೇ ಗುರುತಿಸಿದ್ದರು.

ಕೂಲಿ ಸಿನಿಮಾಗೆ ಅನಿರುದ್ಧ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಳಯರಾಜ ಅವರ ʻವಾ ವಾ ಪಕಂ ವಾʼ ಹಾಡನ್ನು ಚಿತ್ರಕ್ಕಾಗಿ ಮರುಸೃಷ್ಟಿಸಿದ್ದರು. ಇದಕ್ಕೆ ಇಳಯರಾಜ ಅನುಮತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

‘ಕೂಲಿ’ ಟೀಸರ್ ನಿಂದ ಮ್ಯೂಸಿಕ್‌ ತೆಗೆಯದಿದ್ದರೆ ಇಳಯರಾಜ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದು ಸನ್ ಪಿಕ್ಚರ್ಸ್ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ಘಟನೆ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

‘ಕೂಲಿ’ ನಿರ್ದೇಶಕ ಲೋಕೇಶ್ ಕನಕರಾಜ್ ಇಂಥ ತಪ್ಪುಗಳನ್ನು ಮಾಡುತ್ತಾರೆ ಎನ್ನುವ ಆರೋಪ  ಇದೆ. ಈ ಹಿಂದೆ ವಿಕ್ರಮ್ ಸಿನಿಮಾದಲ್ಲೂ ಅವರು ಇಳಯರಾಜ ಅವರು ಹಾಡನ್ನು ಬಳಸಿಕೊಂಡಿದ್ದರು. ಆಗಲೂ ಇಳಯರಾಜ ಗರಂ ಆಗಿದ್ದರು.

‘ಕೂಲಿ’ ಚಿತ್ರದಲ್ಲಿ ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿವೆ. ಆದರೆ ಉಳಿದ ಪಾತ್ರವರ್ಗ ಇನ್ನೂ ಘೋಷಿಸಿಲ್ಲ. ಲೋಕೇಶ್ ಜತೆ ರಜನಿಕಾಂತ್ ಅಭಿನಯದ ಮೊದಲ ಚಿತ್ರ ಇದಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!