ನಟ ಕೋಮಲ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ .. ಸಾಕಷ್ಟು ವರ್ಷಗಳಿಂದ ಸಿನಿಮಾಗಳ ಮೂಲಕ ಜನರನ್ನ ರಂಜಿಸುತ್ತಾ ಬಂದಿರೋ ಕೋಮಲ್ ಈ ವರ್ಷದ ಹುಟ್ಟುಹಬ್ಬವನ್ನ ಸಖತ್ ಸಿಂಪಲ್ ಆಗಿ ಆಚರಣೆ ಮಾಡಿಕೊಂಡ್ರು…
ಸದ್ಯ ಕೋಮಲ್ ಅವ್ರು ಅಭಿನಯ ಮಾಡುತ್ತಿರುವ ತೆನಾಲಿ ಸಿನಿಮಾತಂಡ ಕೋಮಲ್ ಅವರ ಮನೆಗೆ ಭೇಟಿಕೊಟ್ಟು ಕೇಕ್ ಕತ್ತರಿಸೋ ಮೂಲಕ ಕೋಮಲ್ ಕುಮಾರ್ ಅವರ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ರು…ನಿರ್ದೇಶಕ ಸಿದ್ವಿನ್ ದ್ರುವ್ ಕೋಮಲ್ ಅವರಿಗೆ ಹೂಗುಚ್ಚ ನೀಡಿ ಶುಭಾಶಯ ಕೋರುವುದರ ಜೊತೆಗೆ ಶೂಟಿಂಗ್ ಬಗ್ಗೆ ಅಪ್ಡೇಟ್ ಕೊಟ್ರು …

ತೆನಾಲಿ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಸಿನಿಮಾತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ದವಾಗಿದೆ… ತೆನಾಲಿ ಸಿನಿಮಾದಲ್ಲಿ ಕಾಜಲ್ ಕುಂದರ್ ಹಾಗೂ ಅಕ್ಷಿತಾ ಬೋಪಯ್ಯ ನಾಯಕಿಯರಾಗಿ ಕಾಣಿಸಿಕೊಳ್ತಿದ್ದಾರೆ ಚಿತ್ರಕ್ಕೆ ನಿರ್ದೇಶಕ ಸಿದ್ದ್ರುವ್ ಸಿದ್ದು ಸೇರಿದಂತೆ ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳಿಧರನ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಉದಯ್ ಲೀಲಾ ಅವರ ಕ್ಯಾಮೆರಾ ವರ್ಕ್ ಸಿನಿಮಾಗಿರಲಿದೆ.






Be the first to comment