‘ಕೆಜಿಎಫ್ ಚಾಪ್ಟರ್ 3 ಈ ವರ್ಷ ಸೆಟ್ಟೇರುವುದಿಲ್ಲ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
“ನಮ್ಮ ಬಳಿ ಬೇರೆ ಪ್ಲ್ಯಾನ್ ಇದೆ. ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಇವರಿಬ್ಬರೂ ಒಟ್ಟಿಗೆ ಬಂದ ಸಮಯದಲ್ಲಿ ‘ಕೆಜಿಎಫ್ 3′ ಕೆಲಸ ಆರಂಭ ಆಗಲಿದೆ. ಸದ್ಯ ನಾವು ಯಾವುದೇ ಸಮಯವನ್ನು ಫಿಕ್ಸ್ ಮಾಡಿಕೊಂಡಿಲ್ಲ.’ ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.
“ನಾವಿನ್ನೂ ಸ್ಟಾರ್ಕಾಸ್ಟ್ ಬಗ್ಗೆ ಏನೂ ನಿರ್ಧಾರ ತೆಗೆದುಕೊಂಡಿಲ್ಲ. ಕೆಜಿಎಫ್ ಫ್ರಾಂಚೈಸಿಗೆ ಯಾರು ಸೇರಿಕೊಳ್ಳತ್ತಾರೆಂಬುದು ಇನ್ನೂ ನಿರ್ಧಾರವಾಗಿಲ್ಲ” ಎಂದು ಹೇಳಿದ್ದಾರೆ.
ಈ ಹಿಂದೆ ವಿಜಯ್ ಕಿರಗಂದೂರು “ಕೆಜಿಎಫ್ 3′ ಇದೇ ವರ್ಷ ರಿಲೀಸ್ ಆಗುತ್ತದೆ ಎಂದು ಹೇಳಿದ್ದರು. ಅಕ್ಟೋಬರ್ನಲ್ಲಿ ‘ಸಲಾರ್’ ರಿಲೀಸ್ ಆಗುತ್ತದೆ. ಆ ಬಳಿಕ ‘ಕೆಜಿಎಫ್ 3’ ಕೆಲಸ ಆರಂಭ ಆಗುತ್ತದೆ” ಎಂದು ಹೇಳಿದ್ದರು.
ಈಗ ವಿಜಯ್ ಕಿರಗಂದೂರು ಅವರು ಹೃತಿಕ್ ರೋಷನ್ ಚಿತ್ರಕ್ಕೆ ಸೇರ್ಪಡೆ ಆಗುವ ಬಗ್ಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಈ ಹಿಂದೆ ‘ಕೆಜಿಎಫ್ 3’ನಲ್ಲಿ ಹೃತಿಕ್ ರೋಷನ್ ನಟಿಸುತ್ತಾರೆಂಬ ಸುದ್ದಿ ಹರಿದಾಡಿತ್ತು.
___
Be the first to comment