ತನ್ನ ಆಕರ್ಷಣೀಯ ಕಣ್ಣುಗಳಿಂದಲೇ ಸಿನಿರಸಿಕರ ಮನಗೆದ್ದಿದ್ದ, ಬಟ್ಟಲು ಕಣ್ಣಿನ ಮುದ್ದಿನ ಚೆಲುವೆ ಎಂದೇ ಹೆಸರು ವಾಸಿಯಾಗಿದ್ದ ನಟಿ ಮಾನ್ಯ. ಈಕೆ ವಿಷ್ಣುವರ್ಧನ್, ಅಂಬಿ ಮತ್ತು ದರ್ಶನ್ ರಂತ ದೊಡ್ಡ ನಟರು ಸೇರಿದಂತೆ ಇನ್ನು ಕೆಲವರ ಜೊತೆ ಸೇರಿ ಸುಮಾರು 10 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾಳೆ.
ಸಾಹಸಸಿಂಹ ವಿಷ್ಣುವರ್ಧನ್ ನಟನೆಯಲ್ಲಿ ಮೂಡಿಬಂದಿದ್ದ ‘ವರ್ಷಾ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ನೀಡಿದ್ದ ಈ ಚೆಲುವೆಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು.. ಇದರ ಖ್ಯಾತಿ ಈಕೆಯನ್ನು ದರ್ಶನ್, ಶ್ರೀಮುರಳಿ, ಆದಿತ್ಯ, ಸುನೀಲ್ ರಾವ್ ಸೇರಿ ಇನ್ನೂ ಕೆಲವು ಖ್ಯಾತ ನಟಯ ಜೊತೆ ತೆರೆ ಹಂಚಿಕೊಳ್ಳುವ ಸೌಭಾಗ್ಯ ಸಿಕ್ಕಿತ್ತು. ಆದರೆ ಏನಾಯಿತೋ ಏನೋ ನಂತರ ದಿನಗಳಲ್ಲಿ ನಾಪತ್ತೆಯಾಗಿ ಹೋಗಿದ್ದರು. ಯಾವ ಚಿತ್ರಗಳಲ್ಲೂ ಮಾನ್ಯ ನಟಿಸುತ್ತಿರಲಿಲ್ಲ. ಇದಕ್ಕೆ ಕಾರಣ ಹುಡುಕಿ ಹೊರಟವರಿಗೆ ಸಿಕ್ಕಿದ ಉತ್ತರ ಆಕೆ ಅದಾಗಲೇ ಮದುವೆ ಮಾಡಿಕೊಂಡಿದ್ದು, ಚಿತ್ರರಂಗ ತೊರೆದಿದ್ದಳು ಎಂಬುದಾಗಿತ್ತು.
ಇಂಗ್ಲೇಂಡ್ ನಲ್ಲಯೇ ಬೆಳೆದ ಮಾನ್ಯರಿಗೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆದಿತ್ತು,ಕನ್ನಡ ಚಿತ್ರಗಳಲ್ಲಿ ನಟಿಸುವ ಯೋಗ ಇತ್ತೋ ಏನೋ ಈಕೆ ಕೆಲವು ವರ್ಷಗಳ ಕಾಲ ಚಂದನವನದಲ್ಲಿ ಬ್ಯುಸಿ ನಟಿ ಎನಿಸಿಕೊಂಡುಬಿಟ್ಟಿದ್ದಳು. ಕೆಲವೊಂದು ವರ್ಷ ಸಿನಿಮಾಗಳಲ್ಲಿ ನಟಿಸಿದ ಮೇಲೆ ಚಿತ್ರರಂಗದಿಂದ ದೂರ ಸರಿದರು.
ನಂತರ 2008 ರಲ್ಲಿ ಸತ್ಯ ಭಟ್ ರನ್ನು ಮದುವೆಯಾಗಿ, ಸಾಂಸರಿಕ ಜೀವನದಲ್ಲಿ ಬಿರುಕುಂಟಾಗಿ ಆತನಿಗೆ 2012 ರಲ್ಲಿ ವಿಚ್ಚೇದನ ನೀಡಿದರು. ನಂತರ ಉತ್ತರ ಭಾರತಕ್ಕೆ ಸೇರಿದ ವಿಕಾಸ್ ವಾಜಪೇಯಿ ಅವರನ್ನು ಮದುವೆಯಾದರು. ಈಗ ಈ ಜೋಡಿಗೆ ಒಂದು ಮಗುವಿದ್ದು . ಅಮೇರಿಕಾದಲ್ಲಿ ನೆಲೆಸಿದ್ದಾರೆ. ಹಾಗೂ ಎಂಬಿಎ ಮಾಡಿರುವ ಮಾನ್ಯಾ ಇದೀಗ ಕಂಪನಿಯೊಂದರಲ್ಲಿ ‘ಎಚ್ ಆರ್’ ಆಗಿ ಕೆಲಸ ಮಾಡುತ್ತಾ, ಗಂಡ-ಮಗು ಜೊತೆಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ.
ಕನ್ನಡ ಸೇರಿ ಕೆಲವು ಭಾಷೆಗಳಲ್ಲಿ ನಟಿಸಿದ್ದ ಮಾನ್ಯ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದವರು.. ಸಿನಿಮಾರಂಗದಲ್ಲಿ ಮಿಂಚಿ ಅವಕಾಶಗಳಿಲ್ಲದೆ ಮರೆಯಾದ ಎಷ್ಟೋ ನಟಿ ಮಣಿಯರು ತಮ್ಮ ಜೀವನವನ್ನೇ ಹದಗೆಡಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯಿದೆ. ಅಂಥವರ ಮಧ್ಯೆ ಅವಕಾಶಗಳು ಸಿಗದೇ ಇದ್ದರೂ ಪರವಾಗಿಲ್ಲ ತಾನು ಕಲಿತ ವಿದ್ಯೆ ಕೈಹಿಡಿಯುತ್ತದೆ ಎಂಬ ನಂಬಿಕೆಯ ಮೇಲೆ ಸದೃಢವಾಗಿ ಜೀವನ ಸಾಗಿಸುತ್ತಿದ್ದಾರೆ. ತಾನು ಸ್ಟಾರ್ ಹೀರೋಯಿನ್ ಅನ್ನೋ ಅಹಂ ಅನ್ನು ಬಿಟ್ಟು ಕಷ್ಟ ಆದರೂ ಸರಿ ಎಂದು ಆಫೀಸ್ ಕೆಲಸ ಮಾಡಿ ಬದುಕುತ್ತಿರುವ ಮಾನ್ಯ ಅವರ ಈ ಗುಣವನ್ನು ಪ್ರತಿಯೊಬ್ಬರು ಶ್ಲಾಘಿಸಲೇಬೇಕು.
Pingback: Digital transformation