ಇಂದು ಕನ್ನಡದಲ್ಲಿ ಏಳು ಸಿನಿಮಾಗಳು ತೆರೆಗೆ ಬಂದಿದ್ದು, ಪ್ರೇಕ್ಷಕರು ಯಾವ ಚಿತ್ರಕ್ಕೆ ಆಶೀರ್ವಾದ ಮಾಡುತ್ತಾರೆ ಎನ್ನುವ ಕುತೂಹಲ ಉಂಟಾಗಿದೆ.
ಕನ್ನಡದಲ್ಲಿ ಮಿಸ್ಟರ್ ನಟ್ವರ್‌ಲಾಲ್, ಮತ್ಸ್ಯಗಂಧ, ಧೈರ್ಯಂ ಸರ್ವತ್ರ ಸಾಧನಂ, ಫಾರ್ ರಿಜಿಸ್ಟ್ರೇಷನ್, ಒಂದು ಪಿಶಾಚಿಯ ಕಥೆ, ಪ್ರೇತ, ಕಪ್ಪು ಬಿಳುಪಿನ ನಡುವೆ ಸಿನಿಮಾಗಳು ಬಿಡುಗಡೆಯಾಗಿವೆ.
ಫಾರ್ ರಿಜಿಸ್ಟ್ರೇಷನ್
ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ತಾರಾ ಬಳಗ ಇದೆ. ಚಿತ್ರಕಥೆ, ನಿರ್ದೇಶನ ದ್ವಾರಕನಾಥ್, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಳತ್ತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ.
ಧೈರ್ಯಂ ಸರ್ವತ್ರ ಸಾಧನಂ
ಆನಂದ್ ಬಾಬು ನಿರ್ಮಾಣದ ದೊಡ್ಡ ಬಜೆಟಿನ ಚಿತ್ರ ‘ಧೈರ್ಯಂ ಸರ್ವತ್ರ ಸಾಧನಂ’ ಫೆಬ್ರವರಿ 23ರಂದು ಬಿಡುಗಡೆಯಾಗಿದೆ.
‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ನಾಯಕ ನಟ ವಿವಾನ್ ಕೆಕೆ. ಸಿನಿಮಾಗೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೃದಯಶಿವ, ಅರಸು ಅಂತಾರೆ, ಕಿನ್ನಾಳ್ ರಾಜ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರವಿಕುಮಾರ್ ಸನಾ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಕ್ಯಾಪ್ಟನ್ ಕಿಶೋರ್ ಅವರ ನೃತ್ಯ ನಿರ್ದೇಶನ ಸಿನಿಮಾಗೆ ಇದೆ.
‘ಪ್ರೇತ’
ಹರೀಶ್ ರಾಜ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಪ್ರೇತ’ ಚಿತ್ರವನ್ನು ಇಂದು ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿ ಹರೀಶ್ ರಾಜ್ ಸೇರಿದಂತೆ ಐರಾ ಶೆಟ್ಟಿ, ವೆಂಕಟೇಶ್, ಅಮೂಲ್ಯ ಭಾರದ್ವಾಜ್, ಅಮಿತ್, ಸುನೀತಾ, ಪುರುಷೋತ್ತಮ್, ತಿಲಕ್, ಉಮೇಶ್, ಜಯ ತೆರೆ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಹರೀಶ್ ರಾಜ್ ಅವರೇ ತಮ್ಮ ಹರೀಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ. ಜೀವನ್ ಪ್ರಕಾಶ್ ಸಂಕಲನ, ಕಿರಣ್ ಆರ್ ಹೆಮ್ಮಿಗೆ ಡೈಲಾಗ್ ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾಗುತ್ತಿರುವ ಮೊದಲ ಹಾರರ್ ಚಿತ್ರ ಇದಾಗಿದೆ.
ಮತ್ಸ್ಯಗಂಧ
ಇದು ಕರಾವಳಿ ಬೆಲ್ಟ್ ಹಿನ್ನೆಲೆವುಳ್ಳ ಕ್ರೈಮ್ ಚಿತ್ರಕಥೆ. ದೇವರಾಜ್ ಪೂಜಾರಿ ನಿರ್ದೇಶನದ ಮತ್ಸ್ಯಗಂಧದಲ್ಲಿ ಪೃಥ್ವಿ ಅಂಬರ್ ಪೋಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಪ್ರಶಾಂತ್ ಸಿದ್ಧಿ ಅವರು ನೆಗೆಟಿವ್ ಪಾತ್ರ, ಭಜರಂಗಿ ಲೋಕಿ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ ವಿಲನ್ ಆಗಿದ್ದಾರೆ. ಚಿತ್ರದ ತಾರಾಗಣದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಪಿಡಿ ಸತೀಶ್ ಚಂದ್ರ, ದಿಶಾ ಶೆಟ್ಟಿ, ನಿರೀಕ್ಷಾ ಶೆಟ್ಟಿ ಮುಂತಾದವರು ಇದ್ದಾರೆ. ಚಿತ್ರಕ್ಕೆ ಪ್ರವೀಣ್ ಎಂ ಪ್ರಭು ಅವರ ಛಾಯಾಗ್ರಹಣವಿದೆ.
Be the first to comment