ಕನ್ನಡ ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಅಮೋಘ ನಿರೂಪಣಾ ಶೈಲಿಗೆ ಈಗ ತೆಲುಗು ಮತ್ತು ತಮಿಳು ಪ್ರೇಕ್ಷಕರೂ ಫಿದಾ ಆಗಿದ್ದು, ಪಕ್ಕದ ರಾಜ್ಯಗಳಲ್ಲೂ ಸುದೀಪ್ ಅವರ ಹೆಸರು ಜೋರಾಗಿ ಸದ್ದು ಮಾಡುತ್ತಿದೆ.
“ಬಿಗ್ ಬಾಸ್ ನಿರೂಪಣೆ ಅಂದ್ರೆ ಅದು ಸುದೀಪ್ ಥರ ಇರಬೇಕು, ಅವರ ಹಾಗೆ ಕಾರ್ಯಕ್ರಮ ನಡೆಸಿಕೊಡಲು ಯಾರಿಂದಲೂ ಸಾಧ್ಯವಿಲ್ಲ.. ಸುದೀಪ್ಗೆ ಸುದೀಪ್ ಮಾತ್ರ ಸಾಟಿ.. ಒಂದು ಎಪಿಸೋಡ್ ನೋಡಿ ಸಾಕು, ಸುದೀಪ್ ಯಾಕೆ ಲೆಜೆಂಡ್ ಅಂತ ಗೊತ್ತಾಗುತ್ತದೆ” ಎಂಬ ಅರ್ಥದ ಸಾಲುಗಳೊಂದಿಗೆ ತೆಲುಗು ಮತ್ತು ತಮಿಳು ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಮೀಮ್ಸ್ಗಳು ಸಖತ್ ವೈರಲ್ ಆಗುತ್ತಿವೆ.
ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಅವರ ಖಡಕ್ ಮಾತು, ತಪ್ಪು ಮಾಡಿದವರಿಗೆ ಕ್ಲಾಸ್ ತೆಗೆದುಕೊಳ್ಳುವ ರೀತಿ ಮತ್ತು ಅವರ ಆಕರ್ಷಕ ವ್ಯಕ್ತಿತ್ವದ ಖದರ್ ಇದೀಗ ಅನ್ಯಭಾಷೆಯ ಬಿಗ್ ಬಾಸ್ ವೀಕ್ಷಕರ ಮನಗೆಲ್ಲುತ್ತಿದೆ.
ದೇಶದ ವಿವಿಧ ಭಾಷೆಗಳ ಬಿಗ್ ಬಾಸ್ ನಿರೂಪಕರಿಗೆ ಹೋಲಿಸಿದರೆ, ಸುದೀಪ್ ಅವರೇ ‘ದಿ ಬೆಸ್ಟ್ ಹೋಸ್ಟ್’ ಎಂಬ ಮೆಚ್ಚುಗೆಯ ಮಾತುಗಳು ಪರಭಾಷಾ ವೀಕ್ಷಕರಿಂದಲೇ ವ್ಯಕ್ತವಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.





Be the first to comment