Kangaroo Movie Review : ಭ್ರೂಣ ಹತ್ಯೆ ಜಾಗೃತಿ ಮೂಡಿಸುವ ಕಾಂಗರೂ

ಚಿತ್ರ : ಕಾಂಗರೂ
ನಿರ್ದೇಶನ: ಕಿಶೋರ್ ಮೇಗಳ ಮನೆ
ತಾರಾಗಣ: ಆದಿತ್ಯ, ರಂಜನಿ ರಾಘವನ್, ಶಿವ ಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಇತರರು.

ರೇಟಿಂಗ್: 3.5/5

ಹಾರರ್ ಕಥೆಯ ಟಚ್ ಅಪ್ ನೊಂದಿಗೆ ಭ್ರೂಣ ಹತ್ಯೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವಾಗಿ ಕಾಂಗರೂ ಈ ವಾರ ತೆರೆಯ ಮೇಲೆ ಬಂದಿದೆ.

ಇದೊಂದು ಹಾರರ್, ಸಸ್ಪೆನ್ಸ್ ಇರುವ ಥ್ರಿಲ್ಲರ್ ಕಥೆಯಾಗಿದೆ. ನಿರ್ದೇಶಕರು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಲು ಕಥೆಯನ್ನು ಹೆಣೆದಿದ್ದಾರೆ. ಕಾಂಗರೂ ಹೊಟ್ಟೆಯಲ್ಲಿ ತನ್ನ ಮರಿಯನ್ನು ಕಾಪಾಡುವ ರರೀತಿ ಮಹಿಳೆಯೊಬ್ಬಳು ಮಗುವನ್ನು ಜೋಪಾನ ಮಾಡುವ ಕಥೆ ಇಲ್ಲಿದೆ.

ಚಿತ್ರದಲ್ಲಿ ಆದಿತ್ಯ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿ ರಂಜನಿ ರಾಘವನ್ ಮನಶಾಸ್ತ್ರಜ್ಞೆ ಆಗಿ ನಟಿಸಿದ್ದಾರೆ. ಚಿಕ್ಕಮಗಳೂರಿನ ಹೋಂಸ್ಟೇ ಒಂದರಲ್ಲಿ ವಾಸ್ತವ್ಯ ಹೂಡುವ ದಂಪತಿಗಳಿಗೆ ದೆವ್ವ ಕಾಟ ಕೊಡುತ್ತದೆ. ದೆವ್ವವನ್ನು ನೋಡಿದವರು ಬಳಿಕ ನಾಪತ್ತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಸರಣಿ ಪ್ರಕರಣಗಳ ತನಿಖಾಧಿಕಾರಿಯಾಗಿ ಕೆಲಸ ಮಾಡುವ ಆದಿತ್ಯ ಗೆ ಎದುರಾಗುವ ಹಾರರ್ ಸನ್ನಿವೇಶಗಳು ಚಿತ್ರದಲ್ಲಿದೆ.

ಸಿನಿಮಾದಲ್ಲಿ ಪೋಸ್ಟ್ ಟ್ರಾಮಟಿಕ್ ಸ್ಟ್ರೆಸ್ ಡಿಸಾಲ್ಡರ್ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ. ಹಾರರ್ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಿತ್ರದ ಕ್ಲೈಮಾಕ್ಸ್ ಆತ್ಮಹತ್ಯೆಯನ್ನು ಪ್ರಚೋದಿಸುವ ರೀತಿಯಲ್ಲಿ ಮೂಡಿ ಬಂದಿದೆ.

ಚಿತ್ರದಲ್ಲಿ ಕೆಲವೊಮ್ಮೆ ಲಾಜಿಕ್ ಇಲ್ಲದೆ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಪ್ರಕರಣವನ್ನು ಭೇದಿಸಲು ಹೀರೋ ಅನುಸರಿಸುವ ಮಾರ್ಗಗಳಿಗೆ ಸೂಕ್ತ ಅಡಿಪಾಯ ಇಲ್ಲವಾಗಿದೆ.

ಇವೆಲ್ಲದರ ನಡುವೆ ಪೃಥ್ವಿ ಪಾತ್ರದಲ್ಲಿ ಆದಿತ್ಯ ಉತ್ತಮವಾಗಿ ನಟಿಸಿದ್ದಾರೆ. ರಂಜನಿ ರಾಘವನ್ ಸಿನಿಮಾದಲ್ಲಿ ತಮ್ಮ ನಟನೆಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅಮ್ಮನ ಕುರಿತ ಹಾಡಿಗೆ ಸಂಗೀತ ನೀಡಿರುವ ಸಾಧುಕೋಕಿಲ ಅವರು ತಮ್ಮ ಕೆಲಸದ ಮೂಲಕ ಗಮನ ಸೆಳೆಯುತ್ತಾರೆ.

ಚಿತ್ರವನ್ನು ನೋಡಿದಾಗ ನಿರ್ದೇಶಕರು ಎರಡನೇ ಭಾಗವನ್ನು ಆರಂಭಿಸುವ ಮುನ್ಸೂಚನೆ ನೀಡಿದಂತೆ ಕಾಣುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!