ಸಿನಿಮಾ ಆಗುತ್ತಿದೆ ಅಣ್ಣಾಮಲೈ ಜೀವನ ಚರಿತ್ರೆ!

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಜೀವನ ಚರಿತ್ರೆ ಸಿನಿಮಾ ಆಗಲಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ತಮಿಳುನಾಡಿನ ಕರೂರಿನಲ್ಲಿ ಹುಟ್ಟಿ ಕೊಯಮತ್ತೂರಿನಲ್ಲಿ ಬೆಳೆದ ಅಣ್ಣಾಮಲೈ ತಮ್ಮ ಭಾಷಣ ಕೌಶಲ್ಯದಿಂದ ಭಾರತದಾದ್ಯಂತ ಜನಪ್ರಿಯರಾಗಿದ್ದಾರೆ. ಐಪಿಎಸ್‌ ಪದವಿ ಪಡೆದು ಪೊಲೀಸ್‌ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅಣ್ಣಾಮಲೈ ಕೆಲಸ ತೊರೆದು ಬಿಜೆಪಿ ಸೇರಿದ್ದಾರೆ.

39ರ ಹರೆಯದ ಅಣ್ಣಾಮಲೈ ರಾಜಕೀಯ ಪ್ರವೇಶ ಮಾಡಿ ತಮಿಳುನಾಡು ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಸ್ಪೂರ್ತಿದಾಯಕ ಹಿನ್ನೆಲೆ ಹೊಂದಿರುವ ಅಣ್ಣಾಮಲೈ ಅವರ ಜೀವನ ಚರಿತ್ರೆ ತೆರೆಗೆ ಬರಲಿದೆ ಎಂಬ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈ ಸಿನಿಮಾದಲ್ಲಿ ಅಣ್ಣಾಮಲೈ ಅವರ ಪಾತ್ರದಲ್ಲಿ ನಟ ವಿಶಾಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ನಟ ವಿಶಾಲ್  ಈ ಕುರಿತು ಮೌನವಾಗಿದ್ದಾರೆ. ಅಣ್ಣಾಮಲೈ ಅವರು ಸಈ ಕುರಿತು ಸ್ಪಷ್ಟತೆ ನೀಡಿಲ್ಲ.

ಇತ್ತೀಚಿಗೆ ಖ್ಯಾತ ನಟರು ಮತ್ತು ಸೆಲೆಬ್ರಿಟಿಗಳ ಜೀವನ ಚಿರಿತ್ರೆ ಸಿನಿಮಾ ಆಗುತ್ತಿವೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಬಯೋಪಿಕ್‌ ತೆರೆ ಮೇಲೆ ಬರಲಿದೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಸಿನಿಮಾದಲ್ಲಿ ಇಳಯರಾಜ ಪಾತ್ರವನ್ನು ಧನುಷ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!