2011ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ‘ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರದ ಸೀಕ್ವೆಲ್ ಬರುವ ಸಾಧ್ಯತೆ ಖಚಿತವಾಗಿದೆ.
ಚಿತ್ರದ ಮುಂದುವರಿದ ಭಾಗದ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕಿ ಜೋಯಾ ಅಖ್ತರ್ ಸ್ಪಷ್ಟಪಡಿಸಿದ್ದಾರೆ. ಹೃತಿಕ್ ರೋಶನ್, ಅಭಯ್ ಡಿಯೋಲ್ ಹಾಗೂ ಫರ್ಹಾನ್ ಅಖ್ತರ್ ನಿರ್ವಹಿಸಿದ್ದ ಅರ್ಜುನ್, ಕಬೀರ್ ಮತ್ತು ಇಮ್ರಾನ್ ಪಾತ್ರಗಳನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
‘ಜಿಂದಗಿ ನಾ ಮಿಲೇಗಿ ದೊಬಾರಾ’ ಸೀಕ್ವೆಲ್‌ಗಾಗಿ ಕೆಲಸ ನಡೆಯುತ್ತಿದೆ, ಕಥೆ ಸೂಕ್ತವಾಗಿ ರೂಪುಗೊಂಡರೆ ಸಿನಿಮಾ ಖಂಡಿತವಾಗಿಯೂ ಮೂಡಿ ಬರಲಿದೆ. ಹಳೆಯ ಪಾತ್ರಗಳನ್ನು ಮತ್ತೆ ತೆರೆಗೆ ತರುವುದು ವಿಶೇಷ ಅನುಭವವಾಗಲಿದೆ’ ಎಂದು ಜೋಯಾ ಅಖ್ತರ್ ಹೇಳಿದ್ದಾರೆ.
‘ಜಿಂದಗಿ ನಾ ಮಿಲೇಗಿ ದೊಬಾರಾ’ ಭಾರತ ಮತ್ತು ಸ್ಪೇನ್‌ನಲ್ಲಿ ಚಿತ್ರೀಕರಣಗೊಂಡಿತ್ತು. ಸುಮಾರು 45 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 153 ಕೋಟಿ ರೂಪಾಯಿ ಗಳಿಸಿತ್ತು. ಹೃತಿಕ್ ರೋಶನ್, ಅಭಯ್ ಡಿಯೋಲ್, ಫರ್ಹಾನ್ ಅಖ್ತರ್, ಕತ್ರಿನಾ ಕೈಫ್ ಮತ್ತು ಕಲ್ಕಿ ಕೊಚ್ಲಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
—





Be the first to comment