ಜೇಮ್ಸ್ ನಲ್ಲಿ ಪುನೀತ್ ಧ್ವನಿ ಬಳಸಲು ನಿರ್ಧಾರ

ಜೇಮ್ಸ್ ಚಿತ್ರದಲ್ಲಿ ಪುನೀತ್‌ ಅವರ ನೈಜ ಧ್ವನಿಯನ್ನೇ ಸಿನಿಮಾಗೆ ಬಳಸಿಕೊಳ್ಳಲು ಚಿತ್ರತಂಡ ನಿರ್ಧರಿಸಿದ್ದೆ. ಅಕಾಲಿಕವಾಗಿ ಪುನೀತ್ ರಾಜ್ ಕುಮಾರ್ ನಿಧನ ಆಗಿರುವ ಕಾರಣ ಶೂಟಿಂಗ್ ನಡೆಯುತ್ತಿದ್ದ ಜೇಮ್ಸ್ ಚಿತ್ರಕ್ಕೆ ಯಾರು ಡಬ್ಬಿಂಗ್ ಮಾಡುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಈಗ ಚಿತ್ರತಂಡ ಇದಕ್ಕೆ ಉತ್ತರವನ್ನು ನೀಡಿದೆ.

ಶೂಟಿಂಗ್ ಸಂದರ್ಭದಲ್ಲಿ ಅಪ್ಪು ಹೇಳಿರುವ ಸಂಭಾಷಣೆಯನ್ನು ಹಾಗೆ ಉಳಿಸಿಕೊಳ್ಳಲು ಚಿತ್ರತಂಡ ನಿರ್ಧಾರ ಮಾಡಿದೆ. ಚಿತ್ರೀಕರಣ ವೇಳೆ ರೆಕಾರ್ಡ್‌ ಆಗಿರುವ ಸಂಭಾಷಣೆಯನ್ನು ತಂತ್ರಜ್ಞಾನ ಬಳಸಿ ಹಾಗೆಯೇ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿತ್ರತಂಡ ಯೋಜನೆ ರೂಪಿಸಿದೆ. ಸಿನಿಮಾವನ್ನು 2022ರ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವಾದ ಮಾರ್ಚ್ 17ರಂದು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಈಗಾಗಲೇ ಚಿತ್ರತಂಡ ಆರಂಭಿಸಿದೆ.

ಪುನೀತ್ ಧ್ವನಿ ಇಲ್ಲದೆ ಪಾತ್ರವನ್ನು ತೆರೆಮೇಲೆ ನೋಡುವುದು ಬಹಳ ಕಷ್ಟ. ಜೇಮ್ಸ್ ಅವರ ಕೊನೆಯ ಚಿತ್ರ ಆಗಿರುವ ಕಾರಣ ಅವರ ಧ್ವನಿಯನ್ನು ಚಿತ್ರದಲ್ಲಿ ಬಳಸಲು ಚಿತ್ರತಂಡದಿಂದ ನಿರ್ಧರಿಸಲಾಗಿದೆ.
ಚೇತನ್ ನಿರ್ದೇಶನದ ಜೇಮ್ಸ್ ಚಿತ್ರದಲ್ಲಿ ರಾಜಕುಮಾರ ಸಿನಿಮಾದಲ್ಲಿ ನಾಯಕಿಯಾಗಿದ್ದ ಪ್ರಿಯಾ ಆನಂದ್ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. ತಮಿಳು ನಟ ಶರತ್ ಕುಮಾರ್ ವಿಲನ್ ಪಾತ್ರ ಮಾಡಿದ್ದು, ಚಿಕ್ಕಣ್ಣ, ಹರ್ಷ,

ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ, ಅನು ಪ್ರಭಾಕರ್, ಶ್ರೀಕಾಂತ್, ಆದಿತ್ಯ ಮೆನನ್ ತಾರಾ ಬಳಗದಲ್ಲಿ ಇದ್ದಾರೆ.
ಎರಡನೇ ಲಾಕ್ ಡೌನ್ ಬಳಿಕ ಪುನೀತ್ ರಾಜ್ ಕುಮಾರ್ ಅವರ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಜೇಮ್ಸ್ ಚಿತ್ರ ಬಿಡುಗಡೆ ಆಗುವ ಮುನ್ನವೇ ಪುನೀತ್ ಆಗಲಿದ್ದು ವಿಧಿಯ ಲೀಲೆ ಎನ್ನಬಹುದಾಗಿದೆ.
_______

Be the first to comment

Leave a Reply

Your email address will not be published. Required fields are marked *

Translate »
error: Content is protected !!