‘ಜೈ ಹನುಮಾನ್‌’ ಸಿನಿಮಾದಲ್ಲಿ ಬದಲಾವಣೆ

ರಿಷಬ್‌ ಶೆಟ್ಟಿ ಅಭಿನಯದ ‘ಜೈ ಹನುಮಾನ್‌’ ಸಿನಿಮಾದಲ್ಲಿ ಸಿನೆಮಾಟೋಗ್ರಾಫರ್‌ ತಿರುನಾವುಕ್ಕರಸು ಅವರನ್ನು ಬದಲಿಸಿ ಅವರ ಜಾಗಕ್ಕೆ ಈಗ ನಿಮಿಷ್‌ ರವಿ ಅವರನ್ನು ಸೇರಿಸಿಕೊಳ್ಳಲಾಗಿದೆ.

ಈ ವಿಷಯವನ್ನು ನಿಮಿಷ್‌ ರವಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಜೈ ಹನುಮಾನ್‌’ ಸಿನಿಮಾದ ಭಾಗವಾಗಿರುವುದು ತಮ್ಮ ಕನಸು ಈಡೇರಿದಂತಾಗಿದೆ’ ಎಂದು ಹೇಳಿದ್ದಾರೆ.

‘ಕಾಂತಾರ’ ಸರಣಿಯ  ಯಶಸ್ಸಿನ ಬಳಿಕ ರಿಷಬ್‌ ಶೆಟ್ಟಿ  ಮತ್ತೊಮ್ಮೆ ಡಿವೈನ್‌ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಅವರು ಹನುಮಂತನಾಗಿ ತೆರೆ ಮೇಲೆ ಬರಲಿದ್ದಾರೆ. ಹನುಮಂತನ ಪಾತ್ರವನ್ನು ರಿಷಬ್‌ ಶೆಟ್ಟಿ ಯಾವ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಾರೆ? ಎಂಬ ನಿರೀಕ್ಷೆ  ಹೆಚ್ಚಾಗಿದೆ.

‘ಜೈ ಹನುಮಾನ್‌’ ಚಿತ್ರವನ್ನು ‘ಹನುಮ್ಯಾನ್‌’ ಚಿತ್ರದ ನಿರ್ದೇಶಕ ಪ್ರಶಾಂತ್‌ ವರ್ಮಾ ನಿರ್ದೇಶಿಸುತ್ತಿದ್ದಾರೆ. ‘ಹನುಮ್ಯಾನ್‌’ ಸೂಪರ್‌ ಹಿಟ್ ಆದ ನಂತರ ಅದರ ಭಾಗವಾಗಿಯೇ ‘ಜೈ ಹನುಮಾನ್‌’ ಸಿನಿಮಾ ಮೂಡಿಬರುತ್ತಿದೆ. ಅದಕ್ಕಾಗಿ ಈ ಪ್ರಾಜೆಕ್ಟ್‌ ಮೇಲೆ ಈಗಾಗಲೇ ಭಾರೀ ನಿರೀಕ್ಷೆ ಇದೆ.

ಚಿತ್ರದ  ಮುಹೂರ್ತ  ಅಂಜನಾದ್ರಿ ಬೆಟ್ಟದಲ್ಲಿನೆರವೇರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹನುಮನ ಜನ್ಮಸ್ಥಳ ಎಂದು ನಂಬಲಾಗುವ ಅಂಜನಾದ್ರಿಯಲ್ಲೇ ಸಿನಿಮಾಗೆ ಚಾಲನೆ ನೀಡಿರುವುದು ಅಭಿಮಾನಿಗಳ ಭಾವನೆಗೂ ಹತ್ತಿರವಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!