ಪಿ ಲಂಕೇಶ್ ಅವರ ಮೊಮ್ಮಗಳು, ಚಿತ್ರ ನಿರ್ಮಾಪಕಿ ಕವಿತಾ ಲಂಕೇಶ್ ಅವರ ಮಗಳು ಇಶಾ ಲಂಕೇಶ್, ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕೆಲವು ವಾರಗಳ ಹಿಂದಷ್ಟೇ ಪದವಿ ಮುಗಿಸಿ ಬೆಂಗಳೂರಿಗೆ ಮರಳಿದ್ದ ಇಶಾ ಅವರಿಗೆ ಪ್ರೀತಮ್ ಗುಬ್ಬಿ ಅವರ ಚಿತ್ರವೊಂದರ ಪಾತ್ರದ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ಸಿಕ್ಕಿತು. ಅವರು ಅದಕ್ಕೆ ಆಡಿಷನ್ ನೀಡಲು ನಿರ್ಧರಿಸಿದರು. ‘ಮುಂಗಾರು ಮಳೆ’ ಚಿತ್ರದ ಬರಹಗಾರರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಪ್ರೀತಂ ಗುಬ್ಬಿ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ನಿರ್ದೇಶನ ಮಾಡಲು ಸಜ್ಜಾಗಿದ್ದು ಇಶಾ ಲಂಕೇಶ್ ಅವರಿಗೆ ಅವಕಾಶ ನೀಡಿದ್ದಾರೆ.
‘ನಾನು ಸ್ವಲ್ಪ ಸಮಯದಿಂದ ನಟನೆ ಮತ್ತು ಪ್ರದರ್ಶನ ಕಲೆಯನ್ನು ಕಲಿಯುತ್ತಿದ್ದೇನೆ. ನಾನು ಎಲ್ಲರಂತೆ ಆಡಿಷನ್ ಮಾಡುತ್ತಿದ್ದೇನೆ. ಅದೃಷ್ಟವಶಾತ್ ಈ ಯೋಜನೆ ಬಂತು. ನಾನು ಸ್ಕ್ರಿಪ್ಟ್‌ನೊಂದಿಗೆ ಕನೆಕ್ಟ್ ಆಗಿದ್ದೇನೆ. ಅದಕ್ಕಾಗಿಯೇ ನಾನು ಅದನ್ನು ಆರಿಸಿಕೊಂಡೆ’ ಎಂದು ಇಶಾ ಹೇಳುತ್ತಾರೆ.
ನಾನು ನನ್ನ ಆಡಿಷನ್ ವಿವರಗಳನ್ನು ಕಳುಹಿಸಿದೆ ಮತ್ತು ಪ್ರೀತಮ್ ಸರ್ ನನ್ನನ್ನು ಸಂಪರ್ಕಿಸಿದರು. ಅವರು ಕಥೆಯನ್ನು ವಿವರಿಸಿದಾಗ, ನಾನು ಈವರೆಗೆ ಕೇಳಿದ್ದ ಅಥವಾ ತಿಳಿದಿದ್ದ ಇತರ ಚಿತ್ರಗಳಿಗಿಂತ ಅದು ಭಿನ್ನವಾಗಿತ್ತು. ಆ ವಿಷಯವೇ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು’ ಎಂದು ತಿಳಿಸಿದ್ದಾರೆ.
ನವಿಷಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಶಿವರಾಜ್ ಕನಗನಪಳ್ಳಿ ನಿರ್ಮಿಸುತ್ತಿರುವ ಚಿತ್ರದ ಚಿತ್ರೀಕರಣವು ಆಗಸ್ಟ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಚಿತ್ರತಂಡ ಕೇವಲ ನಾಯಕಿಯನ್ನು ಮಾತ್ರ ಪರಿಚಯಿಸಿದೆ.
‘ಮಳೆಯಲಿ ಜೊತೆಯಲಿ’, ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’, ‘ಜಾನು’, ‘ದಿಲ್ ರಂಗೀಲಾ’, ‘ಬಾಕ್ಸರ್’, ‘ಜಾನಿ ಜಾನಿ ಯೆಸ್ ಪಾಪ’, ’99’, ‘ನಾನು ಮತ್ತು ವರಲಕ್ಷ್ಮಿ’, ‘ನಮ್ ದುನಿಯಾ ನಮ್ ಸ್ಟೈಲ್’ ಮತ್ತು ‘ಬಾನದಾರಿಯಲ್ಲಿ’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ ಪ್ರೀತಂ ಗುಬ್ಬಿ ಸ್ವಲ್ಪ ವಿರಾಮದ ನಂತರ ಚಿತ್ರ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.
—-





Be the first to comment