ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟವನ್ನು ಅರ್ಪಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿರುವ ಇಳಯರಾಜ   ಈ ಹಿಂದೆಯೂ  ದೇವಿಗೆ ಬಗೆಬಗೆಯ ಆಭರಣ ನೀಡಿದ್ದರು. ಈ ಬಾರಿ ಮೂಕಾಂಬಿಕಾ ದೇವಿಗೆ ವಜ್ರದ ಕಿರೀಟ ಸಹಿತ ಆಭರಣಗಳನ್ನು ಅರ್ಪಿಸಿದ್ದಾರೆ.  ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ.

ಆಭರಣ ಅರ್ಪಿಸುವ ಮುನ್ನ ದೇಗುಲದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಭಾಗಿಯಾಗಿದ್ದರು. ಕೋಟ್ಯಂತರ ಮೌಲ್ಯದ ಆಭರಣಗಳನ್ನು ಅರ್ಪಿಸಿ ಇಳೆಯರಾಜ ಅವರು ಭಾವುಕರಾಗಿದ್ದರು.

‘ನನ್ನ ಜೀವನದಲ್ಲಿ ಏನೂ ಇರಲಿಲ್ಲ. ಮೂಕಾಂಬಿಕೆಯಿಂದ ನನ್ನ ಜೀವನದಲ್ಲಿ ಪವಾಡ ನಡೆದಿದೆ. ಎಲ್ಲವೂ ದೈವಿಕ ತಾಯಿ ಮೂಕಾಂಬಿಕೆಯ ಕೃಪೆ ಮತ್ತು ಆಶೀರ್ವಾದದಿಂದ ನಡೆದಿದೆ’ ಎಂದು ಇಳೆಯರಾಜ  ಭಾವುಕರಾದರು.

ದೇಗುಲದ ವತಿಯಿಂದ   ಇಳಯರಾಜ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಇಳಯರಾಜ ಅವರ ಮಗ ಕಾರ್ತಿಕ್ ಇಳಯರಾಜ, ಮೊಮ್ಮಗ ಯತೀಶ್ ಇಳಯರಾಜ ಮತ್ತು ಇತರರು ಉಪಸ್ಥಿತರಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!