Huli nayaka: ಹುಲಿ ನಾಯಕ ಮೋಷನ್ ಪೋಸ್ಟರ್ ರಿಲೀಸ್

ಚಕ್ರವರ್ತಿ ನಿರ್ದೇಶನದ ‘ಹುಲಿ ನಾಯಕ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದೆ.

‘ಹುಲಿ ನಾಯಕ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ನಟ ಸುದೀಪ್ ಅವರು ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

ಸುದೀಪ್ ಅವರು, ಹುಲಿ ನಾಯಕ ತಂಡಕ್ಕೆ ಶುಭ ಹಾರೈಸಿದರು. ಸಮಾರಂಭದಲ್ಲಿ ನಟರಾದ ಧನಂಜಯ್, ಪ್ರೇಮ್, ಅನುಪ್ ಭಂಡಾರಿ, ವಸಿಷ್ಠ ಸಿಂಹ, ಪೂಜಾ ಗಾಂಧಿ ಮತ್ತು ಸಂಜನಾ ಗಲ್ರಾನಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರು ಲಕ್ಷ್ಮಣ ನಾಯ್ಕ ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.

ಮಂಜುನಾಥ್ ಡಿ ಅವರು ಮಯೂರ ಮೋಷನ್ ಪಿಕ್ಚರ್ಸ್ ನಲ್ಲಿ ಹುಲಿ ನಾಯಕ ಸಿನಿಮಾ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಮಿಲಿಂದ್ ಗೌತಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಅನ್ಲಾಕ್ ರಾಘವ’ ಚಿತ್ರದ ಮೂಲಕ ಮಿಲಿಂದ್ ಪದಾರ್ಪಣೆ ಮಾಡುತ್ತಿದ್ದಾರೆ. ಏಕಕಾಲದಲ್ಲಿ ಚಿತ್ರೀಕರಣವನ್ನು ಆರಂಭಿಸಲು ನಿರ್ಧರಿಸಲಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!