‘ಟಾಕ್ಸಿಕ್’ ಟೀಸರ್‌ನಲ್ಲಿ ಹಾಟ್ ದೃಶ್ಯಗಳ ಸುರಿಮಳೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದ್ದು,  ಅದರಲ್ಲಿರುವ ಬೋಲ್ಡ್ ದೃಶ್ಯಗಳು  ಚರ್ಚೆಗೆ ಕಾರಣವಾಗಿವೆ.

ಟೀಸರ್‌ನಲ್ಲಿ ಯಶ್ ವಿಭಿನ್ನ ಮಹಿಳಾ ಪಾತ್ರಗಳೊಂದಿಗೆ ಕಾಣಿಸಿಕೊಳ್ಳುವ ದೃಶ್ಯಗಳು, ಗ್ಲಾಮರಸ್ ಫ್ರೇಮ್‌ಗಳು ಹಾಗೂ ಪ್ರಚೋದನಾತ್ಮಕ ನಿರೂಪಣೆ ಗಮನ ಸೆಳೆದಿವೆ. ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್  ಯಾವ ರೀತಿಯ ಪ್ರಮಾಣಪತ್ರ ನೀಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಸೆನ್ಸಾರ್ ಮಂಡಳಿ ಬೋಲ್ಡ್ ದೃಶ್ಯಗಳು ಮತ್ತು ಅತಿಯಾದ ಹಿಂಸಾತ್ಮಕ ಕಂಟೆಂಟ್ ಕುರಿತು ಕಠಿಣ ನಿಲುವು ತಾಳುತ್ತಿರುವ ಹಿನ್ನೆಲೆಯಲ್ಲಿ, ‘ಟಾಕ್ಸಿಕ್’ ಚಿತ್ರದ ಹಲವು ದೃಶ್ಯಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಸಿನಿಮಾ ಬಿಡುಗಡೆಗೂ ಮುನ್ನ ಹಲವು ದೃಶ್ಯಗಳನ್ನು ಕತ್ತರಿ ಮಾಡಬೇಕಾಗುವ ಪರಿಸ್ಥಿತಿ ಎದುರಾಗಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿವೆ.

ಚಿತ್ರದ ಮೊದಲ ಟೀಸರ್‌ನಲ್ಲೂ ಯಶ್ ಮತ್ತು ನಟಿಯೊಬ್ಬರ ಬೋಲ್ಡ್ ದೃಶ್ಯಗಳು ವಿವಾದಕ್ಕೆ ಕಾರಣವಾಗಿದ್ದವು. ಕೆಲ ಸಂಘಟನೆಗಳು ಹಾಗೂ ವ್ಯಕ್ತಿಗಳು CBFCಗೆ ದೂರು ಸಲ್ಲಿಸಿ ಚಿತ್ರಕ್ಕೆ ಪ್ರಮಾಣಪತ್ರ ನೀಡಬಾರದು ಎಂದು ಒತ್ತಾಯಿಸಿದ್ದರು.  ಎರಡನೇ ಟೀಸರ್‌ನಲ್ಲೂ ಅದೇ ಮಾದರಿಯ ಬೋಲ್ಡ್ ಕಂಟೆಂಟ್ ಮುಂದುವರಿದಿರುವುದು  ಚರ್ಚೆಗೆ ಕಾರಣವಾಗಿದೆ.

ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ‘ಟಾಕ್ಸಿಕ್’ ಆಗಸ್ಟ್ 24ರಂದು ತೆರೆಗೆ ಬರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!