ಹೊಂಬಾಳೆ ಫಿಲಂಸ್ ವತಿಯಿಂದ ಹಲವು ಭಾಷೆಗಳ ಸಿನಿಮಾ ಏಕಕಾಲದಲ್ಲಿ..
ಏಳು ವರ್ಷದಲ್ಲಿ ಏಳು ಸಿನಿಮಾ ನಿರ್ಮಾಣ; ಅವುಗಳಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರಗಳು
ಸ್ಯಾಂಡಲ್ವುಡ್ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕೇವಲ ಎಂಟೇ ವರ್ಷದಲ್ಲಿ ಅವಧಿಯಲ್ಲಿ ಇಡೀ ವಿಶ್ವವೇ ತಿರುಗಿನೋಡುವಂಥ ಸಿನಿಮಾಗಳನ್ನು ನೀಡಿ, ಇದೀಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಸಿನಿಮಾ ನಿರ್ಮಾಣ ಮಾಡಲು ಸಂಸ್ಥೆ ದಾಪುಗಾಲಿಟ್ಟಿದ್ದು,
ಡಿಸೆಂಬರ್ 2ರ ಮಧ್ಯಾಹ್ನ 2.09ಕ್ಕೆ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಿದೆ
2014ರಲ್ಲಿ ನಿನ್ನಿಂದಲೇ ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲಂಸ್ನ ಸಿನಿಮಾ ನಿರ್ಮಾಣದ ಪಯಣ, ಅದಾದ ಬಳಿಕ ಮಾಸ್ಟರ್ ಪೀಸ್, ರಾಜಕುಮಾರ್, ಕೆಜಿಎಫ್, ಕೆಜಿಎಫ್ 2, ಯುವರತ್ನ ವರೆಗೂ ಸಾಗಿ ಬಂದಿದೆ. ಒಟ್ಟು ಏಳು ವರ್ಷಗಳಲ್ಲಿ ಏಳು ಸಿನಿಮಾ ನೀಡಿದೆ. ಅವುಗಳಲ್ಲಿ ಮೂರು ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿವೆ. ಇದೀಗ ಈ ಎಲ್ಲ ಸಿನಿಮಾಗಳಿಗಿಂತಲೂ ಮತ್ತೊಂದು ಮಹೋನ್ನತ ಪ್ರಾಜೆಕ್ಟ್ ಘೋಷಣೆಗೆ ಸಂಸ್ಥೆ ಸನ್ನದ್ಧವಾಗಿದ್ದು, ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರವನ್ನು ಘೋಷಣೆ ಮಾಡಿಕೊಳ್ಳಲಿದೆ. ಈ ವಿಶೇಷ ಪ್ರಾಜೆಕ್ಟ್ ನ ಅಸಲಿ ವಿಚಾರವನ್ನು ಡಿ.2 ರಂದು ಮಧ್ಯಾಹ್ನ 2.09ಕ್ಕೆ ಅಧಿಕೃತ ಹೊಂಬಾಳೆ ಫಿಲಂಸ್ ಟ್ವಿಟರ್ನಲ್ಲಿ ಘೋಷಿಸಲಾಗುತ್ತದೆ. ಯಾವ ಚಿತ್ರ,
ನಿರ್ದೇಶಕರು ಯಾರು, ಪಾತ್ರವರ್ಗದ ಮಾಹಿತಿಯನ್ನೂ ಒಂದೊಂದಾಗಿ ಬಿಚ್ಚಿಡಲಿದೆ
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಸಾಕಷ್ಟು ಬೆಳೆವಣಿಗೆ ಹೊಂದಿದ್ದು, ಕನ್ನಡದ ಕೆಜಿಎಫ್ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿದೆ. ಅದರ 10 ಪಟ್ಟು ನಿರೀಕ್ಷೆ ಕೆಜಿಎಫ್ ಚಾಪ್ಟರ್ 2 ಮೇಲೆ ನೆಟ್ಟಿದ್ದು, ಇಡೀ ವಿಶ್ವವೇ ಈ ಸಿನಿಮಾಕ್ಕೆ ಕಾಯುತ್ತಿದೆ. ಅದೇ ರೀತಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲಿ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲಿ ಯಾರೂ ಮಾಡದ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕೆಂದರೆ, ಇನ್ನೆರಡು ದಿನ ಕಾಯಲೇ ಬೇಕು.
Be the first to comment