‘ದೇವದಾಸಿಯರು’ ಚಿತ್ರದ ಟ್ರೈಲರ್ ಬಿಡುಗಡೆ

ಸತೀಶ್ ಆರ್ಯನ್ ನಿರ್ದೇಶನದ ದೇವದಾಸಿಯರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸ್ವಾತಿ ಅಂಬರೀಶ್, ಸಂಜನಾ ನಾಯ್ದು ಹಾಗೂ ಶೃತಿ ನಾಯಕ್ ಅಭಿನಯಿಸಿದ್ದಾರೆ.

ದೇವದಾಸಿಯರು ಸಿನಿಮಾ ವಿಜಯಲಕ್ಷ್ಮಿ ಮಂಜುನಾಥ ರೆಡ್ಡಿ ಅವರ ಕಾದಂಬರಿ ಆಧಾರಿತ ಚಿತ್ರವಾಗಿದೆ. ಈ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಚಿತ್ರಕ್ಕೆ ಎ ಸರ್ಟಿಫಿಕೇಟ್ ದೊರಕಿದೆ. ಸಿನಿಮಾವು ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಾ‌ಣ‌ ಮಾಡಲಾಗಿದ್ದು, ಚಿತ್ರದಲ್ಲಿ ಮೂರು ಹಾಡುಗಳಿವೆ ಎಂದು ಮಾಹಿತಿ ನೀಡಿದರು.

ದೇವದಾಸಿಯರ ಕುರಿತು ಈಗಾಗಲೇ ಸಾಕಷ್ಟು ಕಥೆಗಳು ಬಂದಿದ್ದು, ಆ ಕಥೆಗಳಿಗೂ ಇದಕ್ಕೂ ಭಿನ್ನತೆ ಇದೆಯಂತೆ. ಡಿಸೆಂಬರ್​ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 70 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದ 6 ಜನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ನಿರ್ದೇಶಕ ಅಂಬರೀಷ್ ಹೇಳಿದರು.

ಬಳಿಕ ಚಿತ್ರದ ನಾಯಕಿ ನಟಿ ಸಂಜನಾ ನಾಯ್ಡು ಮಾತನಾಡಿ, ಈಗಾಗಲೇ ತಾವು ನಟಿಸಿದ ಐದು ಚಿತ್ರಗಳು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಒಂದು ಒಳ್ಳೆಯ ಅನುಭವ ಸಿಕ್ಕಿದೆ. ಸಿನಿಮಾವು ದೇವದಾಸಿಯರು ಜೀವನ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದೆ ಎಂದು ಹೇಳಿದರು. ಈ ವೇಳೆ ನಟಿ ಹೇಮಾ ಕೂಡ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!