ಯುವ ಕಲಾವಿದರು ನಟಿಸಿರುವ ‘ಗ್ರೂಫಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗಿದೆ.
ಡಿ. ರವಿ ಅರ್ಜುನ್ ನಿರ್ದೇಶನದ ‘ಗ್ರೂಫಿ’ ಚಿತ್ರ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡದಲ್ಲಿ ಬಿಡುಗಡೆ ಆಗಿದೆ. ಬೆಂಗಳೂರು, ಮೈಸೂರಿನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಚಿತ್ರಮಂದಿರಗಳ ಕಡೆಗೆ ನಿಧಾನವಾಗಿ ಪ್ರೇಕ್ಷಕರು ಬರುತ್ತಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯಿಂದ ಖುಷಿ ಆಗಿರುವ ಚಿತ್ರ ತಂಡ ಹೊಸದಾಗಿ ಥಿಯೇಟ್ರೀಕಲ್ ಟ್ರೈಲರ್ ಬಿಡುಗಡೆ ಮಾಡಿದೆ. ಪಶ್ಚಿಮ ಘಟ್ಟದ ಕಡೆಗೆ ವರದಿಗಾರಿಕೆಗೆ ತೆರಳುವ ನಾಯಕನಿಗೆ ಎದುರಾಗುವ ವಿಚಿತ್ರ ಸನ್ನಿವೇಶಗಳು ಟ್ರೈಲರ್ ನಲ್ಲಿದೆ. ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಜನ ಟ್ರೈಲರ್ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1 ಗಂಟೆ 52 ನಿಮಿಷದ ಸಸ್ಪೆನ್ಸ್, ಥ್ರಿಲ್ಲರ್ ಸಿನೆಮಾ ಆ 20ರಂದು ಬಿಡುಗಡೆ ಆಗಿದೆ. ಫೋಟೋಗ್ರಾಫರ್ ಒಬ್ಬನಿಗೆ ಪಶ್ಚಿಮ ಘಟ್ಟದಲ್ಲಿ ಎದುರಾಗುವ ಸನ್ನಿವೇಶದ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ಕೆ.ಜಿ.ಸ್ವಾಮಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.
ಚಿತ್ರದಲ್ಲಿ ನಟ ಆರ್ಯನ್ ಅವರು ಕಾರ್ತಿಕ್ ಆಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪದ್ಮಶ್ರೀ ಜೈನ್, ಗಗನ್ ಗೌಡ, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ ಅವರು ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ವಿಜೇತ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್ ಅವರು ಸಾಹಿತ್ಯ ರಚಿಸಿದ್ದಾರೆ.
ನೃತ್ಯ ಸಂಯೋಜನೆಯನ್ನು ಇಮ್ರಾನ್ ಸರ್ದಾರಿಯಾ ಮಾಡಿದ್ದು, ಛಾಯಾಗ್ರಹಣ ಅಜಯ ಲಕ್ಷ್ಮೀಕಾಂತ ಅವರದ್ದು ಆಗಿದೆ. ಎಡಿಟರ್ ಆಗಿ ವಿಜೇತ್ ಚಂದ್ರನ್ ಕೆಲಸ ಮಾಡಿದ್ದಾರೆ.
Be the first to comment