‘ಬೈ ಟು ಲವ್’ ಶೂಟಿಂಗ್ ಮುಕ್ತಾಯ

ಹರಿ ಸಂತೋಷ್ ನಿರ್ದೇಶನದ ‘ಬೈ ಟು ಲವ್’ ಚಿತ್ರದ ಚಿತ್ರೀಕರಣ ಆಗಸ್ಟ್ 24 ರಂದು ಮುಕ್ತಾಯಗೊಂಡಿದೆ.

ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದು ಶೀಘ್ರವೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭ ಆಗಲಿದೆ.
ಚಿತ್ರದಲ್ಲಿ ಧನ್ವೀರ್‌ಗೆ ಜೋಡಿಯಾಗಿ ‘ಕಿಸ್’ ಖ್ಯಾತಿಯ ಶ್ರೀಲೀಲಾ ನಟಿಸಿದ್ದಾರೆ. 2020 ಡಿಸೆಂಬರ್ 25 ರಂದು ಬಂಡಿಮಹಾಂಕಾಳ್ಳಮ್ಮನ ದೇವರ ಸನ್ನಿಧಿಯಲ್ಲಿ ‘ಬೈ 2 ಲವ್’ ಚಿತ್ರದ ಮುಹೂರ್ತ ನೆರವೇರಿತ್ತು.

ಚಿತ್ರಕ್ಕೆ ಮಹಿಂದ್ರಾ ಸಿಂಹ ಅವರ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ಕೆ ಎಂ ಪ್ರಕಾಶ್ ಅವರ ಸಂಕಲನ ಇದೆ.

ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಈಗ ಮತ್ತೊಂದು ಸಿನಿಮಾ ಆರಂಭಿಸಿದ್ದು ಚಿತ್ರದ ನಾಯಕನ ಘೋಷಣೆ ಆಗಿದೆ. ‘ಜೋಗಿ’ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅವರು ನಟಿಸಲಿದ್ದಾರೆ.

ಈ ಚಿತ್ರ ಪ್ರೇಮ್‌ ಅವರಿಗೆ 9ನೇ ಸಿನಿಮಾ ಆಗಿದೆ. ಇದು ಧ್ರುವ ಸರ್ಜಾ ಅವರ 6ನೇ ಸಿನಿಮಾ ಆಗಲಿದೆ. ಚಿತ್ರದ ಬಗ್ಗೆ ಮಾಹಿತಿಯನ್ನು ಶೀಘ್ರದಲ್ಲಿ ಕೊಡಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!