ಗಾಳ ಚಿತ್ರದ ಪೋಸ್ಟರ್ ರಿಲೀಸ್

ಶ್ರೀ ಲಕ್ಷ್ಮಿವೆಂಕಟೇಶ್ವರ ಮೋವಿಸ್ ಅವರ ಮಂಜುನಾಥ ಪಿ ವಿ ನಿರ್ಮಾಣದ ಗಾಳ ಚಿತ್ರದ ಪೊಸ್ಟರ್ ನ್ನು ಟೈಗರ್ ಪ್ರಭಾಕರ್ ಮಗ, ನಟ ವಿನೋದ್ ಪ್ರಭಾಕರ್ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್ ಅವರು, ಹೊಸಬರಾಗಿ ನಾವು ಇದೇ ರೀತಿ ಚಿತ್ರರಂಗಕ್ಕೆ ಬಂದೆವು. ಈ ಚಿತ್ರತಂಡ ಕೂಡಾ ಅದೇ ರೀತಿ ಕಾಣಿಸುತ್ತಿದೆ. ಈ ಚಿತ್ರವನ್ನು ಸಾಕಷ್ಟು ಇಷ್ಟ ಪಟ್ಟು ಮಾಡಿದ್ದಾರೆ. ಇವರು ಖಂಡಿತವಾಗಿಯೂ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ಕ್ರೈಮ್ ಅಂಡ್ ಸಸ್ಪೇನ್ಸ್ ಚಿತ್ರವಾದ ಗಾಳ ಚಿತ್ರದ ಪೋಸ್ಟರ್ ಬಿಡುಗಡೆ ವೇಳೆ ನಿರ್ದೇಶಕ ಸಿದ್ದುವಜ್ರಪ್ಪ, ನಾಯಕ ನಟ ಪ್ರತಾಪ್‌, ನಾಯಕಿ ರಂಜಿನಿ ಶಂಕರ್, ಖಳನಟ ನರಸಿಂಹಮೂರ್ತಿ, ಸಹನಟರಾದ ನವೀನ್ ಹೂಗಾರ್, ರಾಘವ್ ಗೌಡಪ್ಪ ಉಪಸ್ಥಿತರಿದ್ದರು.
ಈ ಚಿತ್ರಕ್ಕೆ ಸಂಗೀತ ಎ.ಟಿ ರವೀಶ್ ನೀಡಿದ್ದಾರೆ. ಸಂಕಲನ ಅರವಿಂದ್ ರಾಜ್ ಅವರು ಮಾಡಿದ್ದಾರೆ.
ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು ಆದಷ್ಟು ಶೀಘ್ರ ಚಿತ್ರ ತೆರೆಗೆ ಬರಲು ಕ್ರಮ ವಹಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!