‘ದೃಶ್ಯಂ 3’ ಬಿಡುಗಡೆ ಮುಂದಕ್ಕೆ

ಮೋಹನ್ ಲಾಲ್ ನಟನೆಯ ಬಹುನಿರೀಕ್ಷಿತ  ‘ದೃಶ್ಯಂ 3’ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

‘ದೃಶ್ಯಂ 3’ ಚಿತ್ರೀಕರಣ ಪೂರ್ಣಗೊಂಡಿದ್ದು, ಏಪ್ರಿಲ್ 2ರಂದು ಬಿಡುಗಡೆಯಾಗಬೇಕಾಗಿತ್ತು. ಆದರೆ ವರದಿಗಳ ಪ್ರಕಾರ ಚಿತ್ರತಂಡ ಚಿತ್ರವನ್ನು ಏಪ್ರಿಲ್ ಬದಲಿಗೆ ಮೇ ಅಥವಾ ಜೂನ್ 2026ರಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಗಲ್ಫ್ ರಾಷ್ಟ್ರಗಳಲ್ಲಿ ಉಂಟಾದ ಪರಿಸ್ಥಿತಿಯ ಪರಿಣಾಮ ಚಿತ್ರ ಬಿಡುಗಡೆಗೆ ಅಡಚಣೆ ಉಂಟಾಗಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

ಅತ್ಯಧಿಕ ಭಾಷೆಗಳಿಗೆ ರೀಮೇಕ್ ಆಗಿರುವ ‘ದೃಶ್ಯಂ’ ಸಿನಿಮಾ ಈಗಾಗಲೇ ಎರಡು ಭಾಗಗಳಲ್ಲಿ  ಯಶಸ್ಸು ಕಂಡಿದೆ. ಈ ಭಾಗದಲ್ಲೂ ಜಾರ್ಜ್‌ಕುಟ್ಟಿ ಮತ್ತು ಅವರ ಕುಟುಂಬದ ಕಥೆ ಮುಂದುವರಿಯಲಿದೆ. ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಸೇರಿದಂತೆ ಹಳೆಯ ತಾರಾಗಣವೇ ಚಿತ್ರದಲ್ಲಿ  ಕಾಣಿಸಿಕೊಳ್ಳಲಿದೆ.

‘ದೃಶ್ಯಂ 3’ ಮುಂದೂಡಿಕೆಯಿಂದ ಜಯಸೂರ್ಯ ನಟನೆಯ ‘ಆಡು 3’, ನಿವಿನ್ ಪೌಲಿ ಅವರ ‘ಪ್ರತಿಚ್ಛಾಯ’ ಮತ್ತು ‘ವಾಳಾ 2’ ಸಿನಿಮಾಗಳಿಗೆ ಬಾಕ್ಸ್ ಆಫೀಸ್‌ನಲ್ಲಿ ಲಾಭವಾಗುವ ಸಾಧ್ಯತೆ ಇದೆ. ಅಜಯ್ ದೇವಗನ್ ನಟನೆಯ ಹಿಂದಿ ‘ದೃಶ್ಯಂ 3’ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!