ಪಾಕಿಸ್ತಾನದ ಭಯೋತ್ಪಾದನಾ ಜಾಲ ಕೇಂದ್ರವಾಗಿಸಿಕೊಂಡ ‘ಧುರಂಧರ್ 2’ ಸಿನಿಮಾ ನೋಡಲು ಪಾಕ್‌ನಲ್ಲಿ ಜನ ಮುಗಿ ಬಿದ್ದಿದ್ದಾರೆ.
‘ಧುರಂಧರ್ 2’ ನಿಷೇಧದ ನಡುವೆಯೇ ಪಾಕ್ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿದೆ. ಮೇ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ಧುರಂಧರ್ 2’ ಸಿನಿಮಾ ಪಾಕಿಸ್ತಾನದಲ್ಲಿ ಮಧ್ಯರಾತ್ರಿ ಸ್ಟ್ರೀಮಿಂಗ್ ಆರಂಭವಾಗುತ್ತಿದ್ದಂತೆಯೇ ಲಕ್ಷಾಂತರ ಮಂದಿ ಒಟ್ಟಿಗೆ ವೀಕ್ಷಣೆ ಆರಂಭಿಸಿದ ಪರಿಣಾಮ ಕೆಲ ಹೊತ್ತು ನೆಟ್‌ಫ್ಲಿಕ್ಸ್ ಸರ್ವರ್‌ಗಳೇ ಡೌನ್ ಆಗಿದ್ದವು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಜನ ರಾತ್ರಿ 12 ಗಂಟೆವರೆಗೂ ಮೊಬೈಲ್ ಹಿಡಿದು ಕಾಯುತ್ತಿದ್ದರು. ಸಿನಿಮಾ ಅಪ್ಲೋಡ್ ಆಗುತ್ತಿದ್ದಂತೆ ಎಲ್ಲರೂ ಒಟ್ಟಿಗೆ ವೀಕ್ಷಣೆ ಆರಂಭಿಸಿದರು. ಕೆಲ ಹೊತ್ತು ನೆಟ್‌ಫ್ಲಿಕ್ಸ್ ಸರ್ವರ್ ಸ್ಲೋ ಆಗಿ ಕ್ರ್ಯಾಶ್ ಆದಂತಾಯಿತು” ಎಂದು ಪಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ ಮಾವಿಯಾ ಉಮರ್ ಫಾರೂಕಿ ಹೇಳಿದ್ದಾರೆ.
2025ರಲ್ಲಿ ಬಿಡುಗಡೆಯಾದ ‘ಧುರಂಧರ್’ ಮೊದಲ ಭಾಗಕ್ಕೂ ಪಾಕಿಸ್ತಾನದಲ್ಲಿ ಹುಚ್ಚು ಕ್ರೇಜ್ ಕಂಡುಬಂದಿತ್ತು. ಪೈರಸಿ ಸಿಡಿಗಳು ಬಿಸಿ ಬಿರಿಯಾನಿಯಂತೆ ಮಾರಾಟವಾಗಿದ್ದವು. ಈಗ ‘ಧುರಂಧರ್ 2’ ಮೂಲಕ ಕ್ರೇಜ್ ಮತ್ತೊಮ್ಮೆ ಸ್ಫೋಟಗೊಂಡಿದೆ.
‘ಧುರಂಧರ್ 2’ ಸಿನಿಮಾ ವಿದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಜೂನ್ 4ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
—-





Be the first to comment