ದರ್ಶನ್ ಬರ್ತ್​ಡೇಗೆ ‘ಡೆವಿಲ್’ ಸಿನಿಮಾದ ಫಸ್ಟ್​ ಲುಕ್

ದರ್ಶನ್ ಅವರ ಜನ್ಮದಿನ ಫೆಬ್ರವರಿ 16ರಂದು ‘ಡೆವಿಲ್’ ಸಿನಿಮಾದ ಫಸ್ಟ್​ ಲುಕ್  ರಿವೀಲ್ ಆಗಲಿದೆ.

ಫೆಬ್ರವರಿ 16ರಂದು  ‘ಕಾಟೇರ’ ರಿಲೀಸ್ ಆಗಿ  50 ದಿನ ಪೂರ್ಣಗೊಳ್ಳಲಿದೆ. ಈ ದಿನದಂದೇ ‘ಡೆವಿಲ್’ ಚಿತ್ರದ ಫಸ್ಟ್​ ಲುಕ್ ರಿಲೀಸ್ ಆಗಲಿದೆ ಎಂದು ದರ್ಶನ್ ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವತಾರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಫ್ಯಾನ್ಸ್​ಗೆ ಮೂಡಿದೆ.

ಕೆಲ ತಿಂಗಳ ಹಿಂದೆ ‘ಡೆವಿಲ್’ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಸದ್ದಿಲ್ಲದೆ ಈ ಸಿನಿಮಾ ಕೆಲಸಗಳು ಆರಂಭ ಆಗಿವೆ. ಈ ಮೊದಲು ಸಿನಿಮಾದ ಫಸ್ಟ್ ಲುಕ್ ಎಂದು ಕೆಲವು ಎಡಿಟ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಇದು ಸಿನಿಮಾ ಪೋಸ್ಟರ್ ಅಲ್ಲ ಎಂದು ತಂಡ ಸ್ಪಷ್ಟನೆ ನೀಡಿತ್ತು.

‘ಡೆವಿಲ್’ ನಿರ್ದೇಶಕ ಪ್ರಕಾಶ್​ ವೀರ್ ​ ಅವರು ಗಮನಾರ್ಹ ಸಿನಿಮಾಗಳನ್ನು ನೀಡಿದ್ದಾರೆ.  ‘ಮಿಲನ’, ‘ವಂಶಿ’, ‘ತಾರಕ್​’ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್​ ಮತ್ತು ಪ್ರಕಾಶ್​ ಅವರು ‘ತಾರಕ್​’ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಆ ಸಿನಿಮಾ 2017ರಲ್ಲಿ ಬಿಡುಗಡೆಯಾಗಿ ಫ್ಯಾಮಿಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈಗ ಅವರಿಬ್ಬರ ಕಾಂಬಿನೇಷನ್​ನಲ್ಲಿ ‘ಡೆವಿಲ್​’ ಸಿನಿಮಾ ಸಿದ್ಧವಾಗುತ್ತಿರುವುದರಿಂದ ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ.

‘ಡೆವಿಲ್’ ಸಿನಿಮಾದ ನಾಯಕಿ, ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!