ನಿರ್ದೇಶಕ ರಾಘವೇಂದ್ರ ನಾಯ್ಕ್ ಅವರ ಕಥೆ ಕಳ್ಳತನದ ಆರೋಪವನ್ನು ‘ಲವ್ ಮಾಕ್ಟೇಲ್ 3’ ಸಿನಿಮಾ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಸಂಪೂರ್ಣ ತಳ್ಳಿ ಹಾಕಿದ್ದಾರೆ.
ಡಾರ್ಲಿಂಗ್ ಕೃಷ್ಣ, ಆರೋಪಗಳನ್ನು ತಳ್ಳಿ ಹಾಕಿ, ಅದನ್ನು ‘ಜೋಕ್’ ಎಂದು ಹೇಳಿದ್ದಾರೆ. ‘ನಿಮ್ಮ ಬಳಿ ಪೂರ್ಣ ಸ್ಕ್ರೀನ್ಪ್ಲೇ ಇದೆಯಾ? ಡೈಲಾಗ್‌ಗಳಿವೆಯಾ? ಕೋರ್ಟ್ ಸೀನ್ ಒಂದೇ ಇದ್ದರೆ ಅದು ನಿಮ್ಮದೇ ಎಂದು ಹೇಗೆ ಹೇಳಬಹುದು? ಕೋರ್ಟ್‌ಗೇ ಪೇಟೆಂಟ್ ಇದೆಯಾ? ನಾವು ಈ ಕಥೆಯನ್ನು ಶ್ರಮಪಟ್ಟು ನಿರ್ಮಿಸಿದ್ದೇವೆ, ಕಳ್ಳತನ ಎನ್ನುವುದು ತಪ್ಪು ಆರೋಪ’ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.
ನಿರ್ದೇಶಕ ರಾಘವೇಂದ್ರ ನಾಯ್ಕ್ ‘ಲವ್ ಮಾಕ್ಟೇಲ್ 3’ , ಚಿತ್ರದ ಕಥೆ ತಮ್ಮದೇ ಎಂದು ಗಂಭೀರ ಆರೋಪ ಮಾಡಿದ್ದರು. ‘ತಾವು ಈ ಕಥೆಯನ್ನು ಮೊದಲು ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿದ್ದರೂ, ಆ ಸಮಯದಲ್ಲಿ ಅದನ್ನು ತಿರಸ್ಕರಿಸಲಾಗಿತ್ತು. ಆದರೆ ಇದೀಗ ಅದೇ ಕಥೆಯನ್ನು ಚಿತ್ರದಲ್ಲಿ ಬಳಸಿರುವುದನ್ನು ನೋಡಿ ತಮಗೆ ಶಾಕ್ ಆಗಿದೆ ಎಂದು ರಾಘವೇಂದ್ರ ನಾಯ್ಕ್ ಅವರು ಆರೋಪಿಸಿದ್ದರು.
ಆರಂಭದಲ್ಲಿ ‘ಇತ್ತೀಚೆಗೆ ಹಿಟ್ ಆದ ಸಿನಿಮಾ’ ಎಂದು ಉಲ್ಲೇಖಿಸಿ ಆರೋಪ ಮಾಡಿದ್ದ ರಾಘವೇಂದ್ರ ನಾಯ್ಕ್, ನಂತರ ಮಾಧ್ಯಮಗಳ ಮುಂದೆ ‘ಲವ್ ಮಾಕ್ಟೇಲ್ 3’ ಚಿತ್ರತಂಡದ ವಿರುದ್ಧ ಆರೋಪ ಹೊರಿಸಿದ್ದರು.
—–





Be the first to comment