ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಬರುತ್ತಿರುವ ಕಾಂತಾರ ಸಿನಿಮಾದ ಟ್ರೈಲರ್ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.
ಆಕ್ಷನ್, ಥ್ರಿಲ್ಲರ್, ಕ್ರೈಂ, ತುಳು ಕಲ್ಚರ್ ಈ ರೀತಿಯ ಹಲವು ಹೂರಣ ಇರುವ ಟ್ರೈಲರ್ ಜಬರ್ದಸ್ತ್ ಆಗಿ ಮೂಡಿ ಬಂದಿದೆ.
ಟ್ರೈಲರ್ ನಲ್ಲಿ ಕರಾವಳಿ ಸೊಗಡು, ರಿಷಬ್ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ನಡುವಣ ವೈರತ್ವ ಜೋರಾಗಿ ಮೂಡಿ ಬಂದಿದೆ. ಕಿಶೋರ್ ಕುಮಾರ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕರಾವಳಿಯ ಬದುಕಿನ ಜೊತೆಗೆ ಅಧಿಕಾರಿಗಳ ಸಂಘರ್ಷ ಚಿತ್ರದಲ್ಲಿದೆ. ಭೂತಕೋಲ, ಕಂಬಳ, ಕರಾವಳಿಯ ಹಲವು ಸಂಪ್ರದಾಯ ಆಚಾರ ವಿಚಾರಗಳನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ.
ಹೊಂಬಾಳೆ ಪ್ರೊಡಕ್ಷನ್ ನಿಂದ ಅದ್ಧೂರಿ ಆಗಿ ಸಿನಿಮಾ ಮೂಡಿ ಬಂದಿದೆ. ಕಾಂತಾರ ಚಿತ್ರದ ಬಗ್ಗೆ ಸಿನಿಮಾಸಕ್ತರ ಕುತೂಹಲ ಗರಿ ಗೆದರಿದೆ.
___





Be the first to comment