ಪಳಾರ್

‘ಪಳಾರ್’ ಚಿತ್ರಕ್ಕೆ ಚಾಲನೆ ನೀಡಿದ ಕ್ರೇಜಿಸ್ಟಾರ್ ವಿ. ರವಿಚಂದ್ರನ್

ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಕ್ಲ್ಯಾಪ್ ಮಾಡೋ‌‌ ಮೂಲಕ ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ‌ ಮಾಡೋ ಮೂಲಕ‌ ಪಳಾರ್ ಚಿತ್ರಕ್ಕೆ ಶುಭಹಾರೈಸಿದ್ರು.

ಪಳಾರ್ ಕೆವಿಎನ್ ಅರ್ಪಿಸುವ , KVN ಪ್ರೊಡಕ್ಷನ್ ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಚೊಚ್ಚಲ ನಿರ್ಮಾಣ ಮಾಡ್ತಿರೋ‌ ಚಿತ್ರ. ಗಿಲ್ಲಿ ನಟ ನಾಯಕ ನಟನಾಗಿ ಅಭಿನಯಿಸುತಿರೋ ಚೊಚ್ಚಲ ಚಿತ್ರ. ಹಾಸ್ಯ ಚಿತ್ರಗಳಿಗೆ ಬ್ರ್ಯಾಂಡ್ ಆಗಿರೋ ನಿರ್ದೇಶಕ ಚಂದ್ರ ಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ನ ಸಂಸ್ಥಾಪಕ ಕೆ. ವೆಂಕಟ ನಾರಾಯಣ ಮತ್ತು KVN ಬ್ಯುಸಿನೆಸ್ ಹೆಡ್ ಸುಪ್ರಿತ್ ಹರೀಶ್ ಮತ್ತು ನವೀನ್ಗೆ ಸಾಥ್ ನೀಡ್ತಿದ್ದಾರೆ.

ಪಳಾರ್

ಮುಹೂರ್ತದ ನಂತರ ಗಿಲ್ಲಿನಟನ ಹುಟ್ಟುಹಬ್ಬ ಆಚರಿಸಿದ ಚಿತ್ರತಂಡ, ನವ ನಾಯಕ ನಟನನ್ನ ಚಿತ್ರರಂಗಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್ಲಿ ನಾಯಕಿ ಸಂಭಾವನೆ ಸೇರಿದಂತೆ ಹಲವು ವಿಚಾರಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿ, ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹಂತಹಂತವಾಗಿ ಮಾಹಿತಿ ನೀಡೋದಾಗಿ ತಿಳಿಸಿದ್ರು. ಇದೊಂದು ಸಂಪೂರ್ಣ ಹಾಸ್ಯಮಯ ಹಳ್ಳಿ ಸೊಗಡಿನ ಸಿನಿಮಾ ಆಗಿರಲಿದ್ದು, ನಾಳೆಯಿಂದಲೇ ಚಿತ್ರೀಕರಣ ಆರಂಭಸ್ತಿರೊದಾಗಿ ನಿರ್ದೇಶಕ‌ ಚಂದ್ರ‌ಮೋಹನ್ ತಿಳಿಸಿದ್ರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!