ಕಿಚ್ಚ, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಬಿಗ್​​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅವಮಾನಕಾರಿ ಆಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಆರೋಪದ ಮೇಲೆ ನಿರೂಪಕ ಕಿಚ್ಚ ಸುದೀಪ್ ಹಾಗೂ ಸ್ಪರ್ಧಿ ಅಶ್ವಿನಿಗೌಡ ವಿರುದ್ಧ ದೂರು ದಾಖಲಾಗಿದೆ.

ರಾಮನಗರ ಡಿವೈಎಸ್ಪಿ ಕಚೇರಿಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ಎನ್ನುವವರು ದೂರು ದಾಖಲಿಸಿದ್ದಾರೆ. ರಿಷಾ ವಿರುದ್ಧವೂ ದೂರು ನೀಡಲಾಗಿದೆ.

ಕಾರ್ಯಕ್ರಮದ ನಿರೂಪಕರಾದ ಕಿಚ್ಚ ಸುದೀಪ್ ರಕ್ಷಿತಾಗೆ ಬೆದರಿಕೆ ಹಾಕುವ ರೀತಿ ಮಾತನಾಡಿದ್ದಾರೆ. ರಕ್ಷಿತಾ ವಿರುದ್ಧ ಅಶ್ವಿನಿ ಗೌಡ ಮಾನಹಾನಿಕರ ಪದ ಬಳಕೆ ಮಾಡಿದ್ದಾರೆ. ಇದೆಲ್ಲವನ್ನೂ  ಖಾಸಗಿ ವಾಹಿನಿ ಪ್ರಸಾರ ಮಾಡಿ ರಕ್ಷಿತಾ ಮಾನಹಾನಿಯಾಗುವಂತೆ ಮಾಡಿದೆ.  ರಿಷಾ, ಸಹಸ್ಪರ್ಧಿ ಗಿಲ್ಲಿ ಮೇಲೆ ಹಲ್ಲೆ‌ ಮಾಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮದ ಮುಖ್ಯಸ್ಥರು ಯಾವುದೇ ಕ್ರಮ ವಹಿಸಿಲ್ಲ.  ಈ ಎಲ್ಲಾ ಅಂಶ  ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದ ಸುದೀಪ್, ‘ಪಿತ್ತ ನೆತ್ತಿಗೆ ಏರುತ್ತದೆ’ ಎಂದು ಹೇಳಿದ್ದರು. ಸುದೀಪ್ ಈ ಪದ ಬಳಕೆ ಮಾಡಿದ್ದು ಎಷ್ಟು ಸರಿ? ಅಶ್ವಿನಿ ಗೌಡ ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ. ಹಾಗಾಗಿ ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ ಎಂದು ಸಂಧ್ಯಾ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!