ತನ್ನ ಬರವಣಿಗೆ ಹಾಗೂ ವಿಭಿನ್ನ ಶೈಲಿಯ ಚಿತ್ರಕಥೆಯ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರವನ್ನು ನೀಡುವ ಹಾದಿಯಲ್ಲಿರುವ ಯುವ ನಿರ್ದೇಶಕ ಆರ್ .ಜೈ (ಎಂ . ಜೈರಾಮ್) ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ- 2 ಚಿತ್ರದ ಸಾರಥ್ಯವನ್ನು ವಹಿಸಿಕೊಂಡು ತೆರಿಗೆ ತೆರಲು ಸಿದ್ದರಾಗಿದ್ದಾರೆ. ಅದೇ ರೀತಿ ಪ್ಯಾನ್ ಇಂಡಿಯಾ ಚಿತ್ರದ ಪ್ಲಾನ್ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದ ಫ್ರೀ ಪ್ರೊಡಕ್ಷನ್ ಕೆಲಸವೂ ಕೂಡ ನಡೆಯುತ್ತಿದೆಯಂತೆ. ಇದರ ನಡುವೆ ಈಗ ಒಂದು ವಿಭಿನ್ನ ಪ್ರೇಮ ಕಥೆಯ ಮೂಲಕ ನಿರೀಕ್ಷೆಗೂ ಮೀರಿದಂತಹ ಬೈಕ್ ರೇಸಿಂಗ್ ದೃಶ್ಯಗಳ ಜೊತೆಗೆ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವನ್ನ ಪ್ರೇಕ್ಷಕರ ಮುಂದೆ ತರಲಿದ್ದಾರಂತೆ. ಈ ಚಿತ್ರದ ಚಿತ್ರೀಕರಣ ಕೊನೆ ಹಂತವನ್ನು ತಲುಪಿದ್ದು , ನಾಯಕನ ಹುಟ್ಟು ಹಬ್ಬದಂದು ಫಸ್ಟ್ ಲುಕ್ ಬಿಡುಗಡೆ ಮಾಡುತ್ತಿದ್ದಾರೆ.

ಈ ಚಿತ್ರವನ್ನು ಅದ್ದೂರಿಯಾಗಿ ಉದ್ಯಮಿ ಮಾಲತಿ ಶೇಖರ್ ಶಿವಮೊಗ್ಗ ಎಂ.ಜೆ. ಎಂಟರ್ಟೈನ್ಮೆಂಟ್ ಮೂಲಕ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಲವ್ , ಸಸ್ಪೆನ್ಸ್ , ಆಕ್ಷನ್ ಜಾನರ್ ವಿರುವ ಈ “ಚೇಸರ್” ಚಿತ್ರಕ್ಕೆ ‌ಅರ್ಜುನ್ ಜನ್ಯ ಸಂಗೀತ , ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ , ಕಲೈ ಮಾಸ್ಟರ್ ಕೊರಿಯೋಗ್ರಾಫಿ , ರವಿ ವರ್ಮ ಸಾಹಸ ನಿರ್ದೇಶನವಿದೆ.

ಈ ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ಮರೀನಾ ಮೈಕಲ್ ಕುರಿಸಿಂಗಲ್ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಅನಿಲ್ , ಪ್ರಶಾಂತ್ ಸಿದ್ದಿ , ಉಗ್ರಂ ಮಂಜು, ಸುದೀ ಕಾಕ್ರೋಚ್ , ದೀಪ ರವಿಶಂಕರ್ ಸೇರಿದಂತೆ ತಾರಾ ಬಳಗವೇ “ಚೇಸರ್” ಚಿತ್ರದಲ್ಲಿದ್ದಾರೆ.

SumanthSailendra