ಕ್ಯಾಪ್ಟನ್ ಮಿಲ್ಲರ್ ಚಿತ್ರದ ಮೇಲೆ ಕಾಪಿ ಆರೋಪ

ಕ್ಯಾಪ್ಟನ್ ಮಿಲ್ಲರ್ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ ಕೇಳಿ ಬಂದಿದೆ.

ಧನುಷ್ ಅಭಿನಯದ ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರ ಜನವರಿ 12 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಕ್ಯಾಪ್ಟನ್ ಮಿಲ್ಲರ್ ಸಿನಿಮಾದಿಂದ ನನಗೆ ಅನ್ಯಾಯ ಆಗಿದೆ ಎಂದು ತಮಿಳು ಖ್ಯಾತ ಲೇಖಕ, ನಟ ರಾಮಮೂರ್ತಿ ಆರೋಪ ಮಾಡಿ ಚಿತ್ರತಂಡದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಸಂದರ್ಶನ ನೀಡಿರುವ  ವೇಲು ರಾಮಮೂರ್ತಿ, ‘ಕ್ಯಾಪ್ಟನ್ ಮಿಲ್ಲರ್’ ಕಥೆ ನನ್ನದು, ಕಾಪಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಮ್ಮ ಪತ್ತುಯಾನ್ ಕಾದಂಬರಿಯನ್ನು ನಿರ್ಮಾಪಕರು ಸ್ಪಷ್ಟವಾಗಿ ಕೃತಿಚೌರ್ಯ ಮಾಡಿದ್ದಾರೆ ಮತ್ತು ಕ್ಯಾಪ್ಟನ್ ಮಿಲ್ಲರ್ ನಿರ್ಮಾಪಕರು ಚಿತ್ರ ಮಾಡುವ ಮೊದಲು ಯಾವುದೇ ಅನುಮತಿಯನ್ನು ಕೇಳಲಿಲ್ಲ ಎಂದು ವೇಲು ರಾಮಮೂರ್ತಿ ಹೇಳಿದ್ದಾರೆ.

ಚಲನಚಿತ್ರ ನಿರ್ದೇಶಕರ ಸಂಘದಿಂದ ನ್ಯಾಯ ಕೇಳಲಿದ್ದೇನೆ. ಹಣ ಅಥವಾ ಕೀರ್ತಿ ಪಡೆಯುವ ಉದ್ದೇಶದಿಂದ ಈ ಆರೋಪ ಮಾಡಿಲ್ಲ ಎಂದು ರಾಮಮೂರ್ತಿ ಹೇಳಿದ್ದಾರೆ.

ವೇಲು ರಾಮಮೂರ್ತಿ ಅವರು ಗಿಡಾರಿ, ನಮ್ಮ ವಿದ್ಯಾ ಪಿಳ್ಳೈ, ಅನ್ನತಾ, ಎನ್ ಜಿಕೆ ಮತ್ತು  ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಧನುಷ್ ಸಿನಿಮಾಗಾಗಿ ಕಾಯ್ತಿದ್ರು. ಸಂಕ್ರಾಂತಿ ಗಿಫ್ಟ್ ಆಗಿ ಕ್ಯಾಪ್ಟನ್ ಮಿಲ್ಲರ್ ಸಿನಿಮಾವನ್ನು ಚಿತ್ರತಂಡ ಬಿಡುಗಡೆ ಮಾಡಿತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!