ಬೃಂದಾವಿಹಾರಿ

ನ.20ಕ್ಕೆ ‘ಬೃಂದಾವಿಹಾರಿ’ ಸಿನಿಮಾ ಪ್ರಪಂಚದ್ಯಾಂತ ಬಿಡುಗಡೆ

ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ಅವರು ನಿರ್ಮಿಸಿರುವ ಬಹುನಿರೀಕ್ಷಿತ “ಬೃಂದಾವಿಹಾರಿ” ಚಿತ್ರದ ಪ್ರೀರಿಲೀಸ್ ಸಮಾರಂಭ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು.

ಶ್ರೀನಿವಾಸರಾಜು ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್, ಮಾಳವಿಕಾ ಶರ್ಮ, ದೇವಿಕಾ ಭಟ್ ನಾಯಕ, ನಾಯಕಿಯರಾಗಿ ಅಭಿನಯಿಸಿದ್ದಾರೆ.

ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ನೆಹರು ಮೈದಾನದಲ್ಲಿ ಹಾಕಿದ್ದ ಭವ್ಯ ವರ್ಣರಂಜಿತ ವೇದಿಕೆಯಲ್ಲಿ ನಡೆದ ‘ ‘ಬೃಂದಾವಿಹಾರಿ’ ಚಿತ್ರದ ಪ್ರಿರಿಲೀಸ್ ಸಮಾರಂಭದಲ್ಲಿ ಕಾಮಿಡಿ ಕಿಲಾಡಿಗಳು ಕಲಾವಿದರಾದ ಜಗಪ್ಪ, ಸುಶ್ಮಿತಾ, ಬಿಗ್ ಬಾಸ್ ವಿಜೇತರಾದ ಗಿಲ್ಲಿ ನಟ, ಮಂಜು ಪಾವಗಡ ಸೇರಿದಂತೆ ಅನೇಕ ಕಲಾವಿದರ ಕಾಮಿಡಿ ಕಾರ್ಯಕ್ರಮಗಳು ಹಾಗೂ ಚಿತ್ರದ ಹಾಡುಗಳಿಗೆ ಕಲಾವಿದರ ಅಮೋಘ ನೃತ್ಯ ಪ್ರದರ್ಶನ ನೆರೆದಿದ್ದ ಸಹಸ್ರಾರು ಅಭಿಮಾನಿಗಳನ್ನು ರಂಜಿಸಿದವು.

ಬೃಂದಾವಿಹಾರಿ

ವೇದಿಕೆಯಲ್ಲಿ ಮಾತನಾಡಿದ ನಿರ್ಮಾಪಕ ಸಮೃದ್ದಿ ವಿ. ಮಂಜುನಾಥ್ ಬೃಂದಾವಿಹಾರಿ ಒಂದೊಳ್ಳೆ ಚಿತ್ರ. ಉತ್ತರ ಕರ್ನಾಟಕದ ಜನತೆ ಕ‌ನ್ನಡ ಚಿತ್ರಗಳನ್ನು ಸದಾ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಅದೇ ರೀತಿ ನಮ್ಮ ಚಿತ್ರವನ್ನೂ ವೀಕ್ಷಿಸಿ,ಆ ಮೂಲಕ ನಮಗೆ ಬೆಂಬಲಿಸಿ ಎಂದು ಆಶೀರ್ವಾದ ಬೇಡಲು ನಿಮ್ಮಬಳಿ ಬಂದಿದ್ದೇವೆ. ಸದ್ಯ “ಪ್ರೇಮದ ಊರಲಿ” ಎಲ್ಲಾ ಕಡೆ ಚೆನ್ನಾಗಿ ಹೋಗುತ್ತಿದೆ. ಹಾಗಾಗಿ ನಮ್ಮ ಚಿತ್ರದ ಬಿಡುಗಡೆಯನ್ನು ಅ.16ರಿಂದ ನ.20ಕ್ಕೆ ಮುಂದಕ್ಕೆ ಹಾಕಿದ್ದೇವೆ. ದಯಮಾಡಿ ನಮ್ಮನ್ನು ಹರಸಿ ಎಂದು ಹುಬ್ಬಳ್ಳಿ ಮಂದಿಯ ಸಹಕಾರವನ್ನು ಕೋರಿದರು. ವೇದಿಕೆಯಲ್ಲಿ ಹಾಜರಿದ್ದ ಶಾಸಕರಾದ ಪ್ರಸಾದ್ ಅಬ್ಬಯ್ಯ, ರಾಜುಗೌಡ, ಅರವಿಂದ್ ಬೆಲ್ಲದ್ ಶುಭ ಹಾರೈಸಿದರು.

ನಾಯಕ ನಟ ಗಣೇಶ್ ಮಾತನಾಡಿ ಹುಬ್ಬಳ್ಳಿ ಜನತೆಗೆ ತಮ್ಮದೇ ಧಾಟಿಯಲ್ಲಿ ನಮಸ್ಕಾರ ಹೇಳಿ, ನಮ್ಮ ಚಿತ್ರವನ್ನು ಗೆಲ್ಲಿಸಿ ಎಂದರು.

ಹಿರಿಯನಟ ರಂಗಾಯಣ ರಘು ಮಾತನಾಡಿ ಒಂದು ಚಿತ್ರಕ್ಕಾಗಿ ಮತ್ತೊಂದು ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿರುವುದು ನಿರ್ಮಾಪಕರ ದೊಡ್ಡಗುಣ ಎಂದು ಮಂಜುನಾಥ್ ಅವರನ್ನು ಹೊಗಳಿದರು.

ಮತ್ತೊರ್ವ ಅತಿಥಿ ಡಾರ್ಲಿಂಗ್ ಕೃಷ್ಣ ಮಾತನಾಡಿ ಗಣೇಶ್ ಅವರು ನನ್ನ ಸಿನಿಮಾ ಬಂದಾಗೆಲ್ಲ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ‌. ಫ್ಯಾಮಿಲಿ ಕಂಟೆಂಟ್ ನನಗೆ ಇಷ್ಟವಾದ ಜಾನರ್, ಚಿತ್ರ ಖಂಡಿತ ಯಶಸ್ವಿಯಾಗುತ್ತದೆ ಎಂದು ಹಾರೈಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!