ನಿರ್ದೇಶನ: ಶ್ರೀನಿಧಿ ಬೆಂಗಳೂರು
ತಾರಾ ಬಳಗ: ದೀಕ್ಷಿತ್ ಶೆಟ್ಟಿ, ಮಂದಾರ ಬಟ್ಟಲಹಳ್ಳಿ, ಗೋಪಾಲ ದೇಶಪಾಂಡೆ ಇತರರು
ರೇಟಿಂಗ್: 4/5
ಟೈಮ್ ಟ್ರಾವೆಲಿಂಗ್ ನ ರೋಚಕ ಅನುಭವ ನೀಡುವ ಹೊಸ ಬಗೆಯ ಸಿನಿಮಾ ” ಬ್ಲಿಂಕ್ “.
ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು ಗ್ರೀಕ್ ನಾಟಕ ಇಡಿಪಸ್ ರೆಕ್ಸ್ ನಿಂದ ಸ್ಪೂರ್ತಿ ಪಡೆದು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಾಮಾನ್ಯ ಹುಡುಗನ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳನ್ನು ಆಧರಿಸಿ ನಿರ್ದೇಶಕರು ಸೂಕ್ಷ್ಮವಾಗಿ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.
ಚಿತ್ರ ಪ್ರೇಕ್ಷಕರನ್ನು 1996 ರಿಂದ 20035 ರ ನಡುವಿನ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ಕಥಾನಾಯಕ (ದೀಕ್ಷಿತ್) ಟೈಮ್ ಟ್ರಾವೆಲಿಂಗ್ ನಲ್ಲಿ ಸಿಲುಕಿಕೊಂಡು ಭೂತ ವರ್ತಮಾನ ಹಾಗೂ ಭವಿಷ್ಯದ ನಡುವೆ ಸಂಚರಿಸುತ್ತಾನೆ. ಈ ನಡುವೆ ಬದುಕಿನ ಅನೇಕ ಸತ್ಯಗಳನ್ನು ತಿಳಿದುಕೊಳ್ಳುತ್ತಾನೆ. ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಸರಿ ಮಾಡಲು ಒದ್ದಾಡುತ್ತಾನೆ. ಇದೆಲ್ಲವನ್ನು ತಿಳಿದುಕೊಳ್ಳಲು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬೇಕಾಗಿದೆ.
ವೈಜ್ಞಾನಿಕ ಥ್ರಿಲ್ಲರ್ ಕಥೆ ಆಗಿರುವ ಬ್ಲಿಂಕ್ ಹಲವು ಟ್ವಿಸ್ಟ್ ಹಾಗೂ ಟರ್ನ್ ಗಳನ್ನು ತೆಗೆದುಕೊಳ್ಳುತ್ತದೆ. ಕಾಲ್ಪನಿಕ ಜಗತ್ತಿನ ಬಗ್ಗೆ ಆಸಕ್ತಿ ಇರುವವರಿಗೆ ಸಿನಿಮಾ ತುಂಬಾ ಇಷ್ಟವಾಗುತ್ತದೆ.
ಚಿತ್ರದಲ್ಲಿ ರಂಗಭೂಮಿಯ ಟಚ್ ಹೆಚ್ಚಾಗಿ ಕಂಡು ಬರುತ್ತದೆ. ನಿರ್ದೇಶಕರು ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ನಾಯಕ ನಟ ದೀಕ್ಷಿತ್ ಶೆಟ್ಟಿ ಅವರು ಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಅವರ ಅಭಿನಯ ಗಮನ ಸೆಳೆಯುತ್ತದೆ.
ಟೈಮ್ ಟ್ರಾವೆಲ್ ಕಥೆಯಾಗಿರುವ ಕಾರಣ ಸಿನಿಮಾದಲ್ಲಿ ನಿರೂಪಣೆ ಸರಾಗವಾಗಿ ಹೋಗಿಲ್ಲ. ಒಂದಷ್ಟು ಗೊಂದಲ ಕಂಡು ಬರುತ್ತದೆ. ನಿರ್ದೇಶಕರು ಪ್ರೇಕ್ಷಕರ ತಲೆಗೆ ಕೂಡ ಒಂದಷ್ಟು ಕೆಲಸ ಕೊಡುತ್ತಾರೆ. ಒಟ್ಟಾರೆ ಹೊಸ ಬಗೆಯ ಚಿತ್ರವಾಗಿ ಬ್ಲಿಂಕ್ ಓಕೆ ಅನಿಸುತ್ತದೆ.
____
Be the first to comment