ಭರವಸೆ

ಭರವಸೆಯೇ ಬದುಕಿನ ಹೊಸಬೆಳಕು

ಮನ ಸೆಳೆಯುವ ಶೀರ್ಷಿಕೆ ಭರವಸೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಉಚ್ಚ ನ್ಯಾಯಲಯದ ವಕೀಲರು, ಸರ್ಕಾರಿ ಅಧಿಕಾರಿಗಳು, ರಾಜಕೀಯ ಧುರೀಣರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ’ಪ್ರೀತ್ಸೋ ಹೃದಯಕ್ಕೆ’ ಎಂಬ ಕ್ಯಾಚಿ ಅಡಬರಹ ಇರಲಿದೆ. ಆರ್.ಆರ್.ಮೂವೀ ಮೇಕರ‍್ಸ್ ಅಡಿಯಲ್ಲಿ ಶಿವಮೊಗ್ಗದ ಕಂಟ್ರಾಕ್ಟರ್, ಉದ್ಯಮಿ ನಾಗರಾಜ್ ಅವರು ಪತ್ನಿ ಲಕ್ಷೀನಾಗರಾಜ್ ಹೆಸರಿನಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮುತ್ತು ಗಂಗೂರ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ.

ತಾರಾಗಣದಲ್ಲಿ ವಿನಾಯರಾಜ್, ಅಹಲ್ಯಸುರೇಶ್, ಹೊನ್ನವಳ್ಳಿಕೃಷ್ಣ, ಶೋಭರಾಜ್, ಮನಮೋಹನ್‌ರೈ, ಕಿಲ್ಲರ್‌ವೆಂಕಟೇಶ್, ಕೆಂಪೆಗೌಡ ಮುಂತಾದವರು ನಟಿಸಿದ್ದಾರೆ.

ಭರವಸೆ

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಅನಿವಾರ್ಯ ಕಾರಣದಿಂದ ವರ್ಷಗಳ ಕಾಲ ತಡವಾಗಿದೆ. ಆದರೂ ಅಂದುಕೊಂಡಂತೆ ಚೆನ್ನಾಗಿ ಬಂದಿದೆ. ಪ್ರೀತಿ, ಕ್ರೈಂ ಎಳೆ ಇದ್ದರೂ, ಅಪ್ಪ-ಅಮ್ಮ, ಗೆಳತನದ ಭಾವನಾತ್ಮಕ ಸನ್ನಿವೇಶಗಳು ಟೈಟಲ್‌ಗೆ ತಕ್ಕಂತೆ ತೋರಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಒಂದೊಂದು ಭರವಸೆಯನ್ನು ಇಟ್ಟುಕೊಂಡಿರುತ್ತಾನೆ. ಸೋತೋನು ಗೆಲ್ಲುತ್ತಾನೆ. ಗೆದ್ದವನು ಇನ್ನೆನೋ ಸಾಧಿಸಬೇಕೆಂಬ ಹಪಾಹಪಿ ಇರುತ್ತದೆ. ಅದೇ ರೀತಿ ಹುಡುಗನೊಬ್ಬನ ಜೀವನದಲ್ಲಿ ಭರವಸೆ ಅಂತ ಹೋದಾಗ ತರಾವರಿ ಘಟನೆಗಳು ನಡೆಯುತ್ತದೆ. ಅದಕ್ಕೆ ಕಾರಣವೇನು? ಅಂತಿಮವಾಗಿ ಅದೆಲ್ಲಾವನ್ನು ಭೇದಿಸಿ ಹೇಗೆ ಸಪಲನಾಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮಾಧ್ಯಮದವರು ನಮ್ಮ ಮೇಲೆ ಭರವಸೆ ಇಟ್ಟುಕೊಂಡು ಬೆನ್ನು ತಟ್ಟಬೇಕೆಂದು ಮುತ್ತು ಗಂಗೂರ ಕೋರಿಕೊಂಡರು.

ನಿರ್ಮಾಪಕ ನಾಗರಾಜ್ ಹೇಳುವಂತೆ ಬಸವಣ್ಣನ ತತ್ವ ಕಾಯಕವೇ ಕೈಲಾಸ ಚಿತ್ರಕ್ಕೆ ಅನ್ವಯಿಸುತ್ತದೆ. ಹಣ ಹಾಕಲು ಬಂದವನಿಗೆ ನಿರ್ದೇಶಕರು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿಸಿದ್ದಾರೆ. ಮುಂದೆ ಮಕ್ಕಳ ಸಿನಿಮಾ ’ಪಾಠಶಾಲೆ’ ಗೆಳೆಯ ಸುರೇಶ್ ಕಂಠಿ ಅವರೊಂದಿಗೆ ಸೇರಿಕೊಂಡು ನಿರ್ಮಾಣ ಮಾಡಲಿದ್ದೇನೆ. ಹಣ ವಾಪಸ್ಸು ಬರುತ್ತದೆಂಬ ಭರವಸೆ ಇದೆ ಎಂದರು.

ಭರವಸೆ

ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ಟಾರ್ ಸಿಂಗರ‍್ಸ್‌ಗಳಾದ ರಾಜೇಶ್‌ಕೃಷ್ಣನ್, ವಿಜಯಪ್ರಕಾಶ್, ಶಮಿತಾಮಲ್ನಾಡ್, ಅನುರಾಧಭಟ್, ಸುಪ್ರಿಯಲೋಹಿತ್ ಹಾಡಿರುವುದು ವಿಶೇಷ. ಸಂಗೀತ ಶ್ರೀಹರ್ಷ ಕಾಗೋಡ್, ಛಾಯಾಗ್ರಹಣ ವೀನಸ್ ಮೂರ್ತಿ, ಸಾಹಸ ಸ್ಟಂಟ್ ಸಿದ್ದು, ಸಂಕಲನ ಕುಮಾರ್.ಸಿ.ಹೆಚ್, ಸಾಹಿತ್ಯ ಶ್ರೀತೇಜ-ಅಭಿಜಿತ್ ತೀರ್ಥಹಳ್ಳಿ ಅವರದಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡಿರುವ ಸಿನಿಮಾವು ಆಗಸ್ಟ್ ತಿಂಗಳಿನಲ್ಲಿ ತೆರೆ ಕಾಣಲಿದೆ.

ಭರವಸೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!