ಏಳು ದಿನಗಳ ಕಾಲ ನಡೆದ 15ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕನ್ನಡ, ಭಾರತೀಯ ಮತ್ತು ಏಷ್ಯಾ ಚಿತ್ರರಂಗದ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
ನಿರ್ದೇಶಕ ಅಮರ್ ಎಲ್ ಅವರ ನಿರ್ವಾಣ ಮೊದಲ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಚಿತ್ರೋತ್ಸವವು ಏಷ್ಯನ್ ಸಿನಿಮಾ ಸ್ಪರ್ಧೆ, ಚಿತ್ರಭಾರತಿ (ಭಾರತೀಯ ಸಿನಿಮಾ) ಸ್ಪರ್ಧೆ, ಕನ್ನಡ ಸಿನಿಮಾ ಸ್ಪರ್ಧೆ ಒಳಗೊಂಡಿತ್ತು.
ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಲಿಯಮ್ಸನ್, ” 21ನೇ ಶತಮಾನದಲ್ಲಿ ಸಿನಿಮಾ ಅತ್ಯಂತ ಜನಪ್ರಿಯ ಕಲಾಪ್ರಕಾರ. ನಾವು ಕರಾಳ ಕಾಲದಲ್ಲಿದ್ದೇವೆ. ಸ್ಥಳೀಯ ಸಿನಿಮಾ ಮಾತ್ರವಲ್ಲದೆ, ಅಂತರಾಷ್ಟ್ರೀಯ ಸಿನಿಮಾಗಳ ಬಗ್ಗೆ ಅಪಾರವಾದ ಆಕರ್ಷಣೆ ಹೊಂದಿರುವ ಇಲ್ಲಿನ ಪ್ರೇಕ್ಷಕರಿಂದ ನಾನು ಪ್ರಭಾವಿತನಾಗಿದ್ದೇನೆ. ಭಾರತದಲ್ಲಿ ಪ್ರಾದೇಶಿಕ ಸಿನಿಮಾ ಅತ್ಯಂತ ಪ್ರಬಲವಾಗಿದೆ. ಈ ಹಿಂದೆ ಕನ್ನಡ ಸಿನಿಮಾ ನೋಡುವ ಅವಕಾಶ ಸಿಕ್ಕಿರಲಿಲ್ಲ. ಸಾಮಾಜಿಕ ಸಮಸ್ಯೆಗಳೊಂದಿಗೆ ಸಾರ್ವತ್ರಿಕವಾದ ಕಥೆಗಳು ಇದ್ದವು. ಮನುಷ್ಯನಾಗಿ ನಾನು ಅದರೊಂದಿಗೆ ಗುರುತಿಸಿಕೊಂಡಿದ್ದೇನೆ ಮತ್ತು ಅದಕ್ಕೆ ಪ್ರತಿಕ್ರಿಯಿಸಿದ್ದೇನೆ” ಎಂದರು.
ಎಂಎಸ್ ಸತ್ಯು: ಜೀವಮಾನ ಸಾಧನೆ ಪ್ರಶಸ್ತಿ
ಕನ್ನಡ ಸಿನಿಮಾ ಸ್ಪರ್ಧೆ:
ಮೊದಲ ಅತ್ಯುತ್ತಮ ಚಿತ್ರ- ನಿರ್ವಾಣ (ನಿರ್ದೇಶನ: ಅಮರ್ ಎಲ್)
ಎರಡನೇ ಅತ್ಯುತ್ತಮ ಚಿತ್ರ- ಕಂಡೀಲು (ನಿರ್ದೇಶನ: ಕೆ ಯಶೋದಾ ಪ್ರಕಾಶ್)
ಮೂರನೇ ಅತ್ಯುತ್ತಮ ಚಿತ್ರ – ಆಲ್ ಇಂಡಿಯಾ ರೇಡಿಯೋ (ನಿರ್ದೇಶನ: ರಂಗಸ್ವಾಮಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ – ಕ್ಷೇತ್ರಪತಿ (ನಿರ್ದೇಶನ: ಶ್ರೀಕಾಂತ್ ಕಟಗಿ)
NETPAC ತೀರ್ಪುಗಾರರ ಪ್ರಶಸ್ತಿ- ಸ್ವಾತಿ ಮುತ್ತಿನ ಮಳೆ ಹನಿ (ನಿರ್ದೇಶನ: ರಾಜ್ ಬಿ ಶೆಟ್ಟಿ)
ಭಾರತೀಯ ಸಿನಿಮಾ ಸ್ಪರ್ಧೆ:
ಮೊದಲ ಅತ್ಯುತ್ತಮ ಚಿತ್ರ- ಶ್ಯಾಮ್ಚಿ ಆಯಿ; ಮರಾಠಿ (ನಿರ್ದೇಶನ: ಸುಜಯ್ ದಾಹಕೆ)
ಎರಡನೇ ಅತ್ಯುತ್ತಮ ಚಿತ್ರ- ಅಯೋತಿ; ತಮಿಳು (ನಿರ್ದೇಶನ: ಆರ್ ಮಂತ್ರ ಮೂರ್ತಿ)
ಮೂರನೇ ಅತ್ಯುತ್ತಮ ಚಿತ್ರ – ಚೇವರ್; ಮಲಯಾಳಂ (ನಿರ್ದೇಶನ: ಟಿನು ಪಪ್ಪಚನ್)
ಫಿಪ್ರೆಸ್ಕಿ ಪ್ರಶಸ್ತಿ- ಶ್ಯಾಮ್ಚಿ ಆಯಿ (ನಿರ್ದೇಶನ: ಸುಜಯ್ ದಾಹಕೆ)
ಏಷ್ಯನ್ ಸಿನಿಮಾ ಸ್ಪರ್ಧೆ:
ಮೊದಲ ಅತ್ಯುತ್ತಮ ಚಿತ್ರ – ಇನ್ಶಾಲ್ಲಾ ಎ ಬಾಯ್ (ನಿರ್ದೇಶನ: ಅಜ್ಮಲ್ ಅಲ್ ರಶೀದ್)
ಎರಡನೇ ಅತ್ಯುತ್ತಮ ಚಿತ್ರ – ಸ್ಥಳ್ (ನಿರ್ದೇಶನ: ಜಯಂತ್ ದಿಗಂಬರ್ ಸೋಮಲ್ಕರ್)
ಮೂರನೇ ಅತ್ಯುತ್ತಮ ಚಿತ್ರ – ಸಂಡೆ (ನಿರ್ದೇಶನ: ಶೋಕಿರ್ ಕೊಲಿಕೋವ್)
ತೀರ್ಪುಗಾರರ ವಿಶೇಷ ಪ್ರಶಸ್ತಿ – ಮಿತ್ಯಾ (ನಿರ್ದೇಶನ: ಸುಮಂತ್ ಭಟ್)
—–
Be the first to comment